ಕುಕನೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಕುಕನೂರು ಪಟ್ಟಣಕ್ಕೆ ಬರಲಿದ್ದು ಸಂಜೆ ಗುರುಕುಲ ಕಾಲೇಜು ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಈ ವಿಷಯ ಕುರಿತಂತೆ ಬ್ಲಾಕ್ ಕಾಂಗ್ರೆಸ್ ಪಕ್ಷದ ತಾಲೂಕು ವಕ್ತಾರ ಸಂಗಮೇಶ ಗುತ್ತಿ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ನಾಳೆ ಸಂಜೆ ಐದು ಘಂಟೆಗೆ ಕುಕನೂರು ಪಟ್ಟಣಕ್ಕೆ ಕಾಂಗ್ರೆಸ್ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಲಿದ್ದು ಇವರ ಜೊತೆಗೆ ಜಮೀರ್ ಅಹ್ಮದ್ ಖಾನ್, ಲಕ್ಷ್ಮಣ್ ಸವದಿ, ಯಲಬುರ್ಗಾ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಸವರಾಜ್ ರಾಯರಡ್ಡಿ ಇತರರು ಚುನಾವಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದೆ ಸಂದರ್ಭದಲ್ಲಿ ತಾಲೂಕಿನ ಬಿಜೆಪಿ ಪಕ್ಷದ ಕೆಲ ಹಿರಿಯ ಮುಖಂಡರು ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುತ್ತಿದ್ದಾರೆ ಎನ್ನಲಾಗುತ್ತಿದೆ.
ನಾಮಪತ್ರ ಸಲ್ಲಿಸಲು ಕೆಲವೇ ಕೆಲವು ದಿನ ಬಾಕಿ ಇದ್ದು ಅದಕ್ಕೂ ಮುನ್ನ ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಕುಕನೂರು ಪಟ್ಟಣದಲ್ಲಿ ಬ್ರಹತ್ ಚುನಾವಣಾ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬಿಸಿಲಿನ ತಾಪದ ಜೊತೆಗೆ ಚುನಾವಣೆ ಕಾವು ಏರುತ್ತಿದೆ.
ವರದಿ : ಈರಯ್ಯ ಕುರ್ತಕೋಟಿ