Congress :ಮೀಸಲಾತಿ ವಿಳಂಬ : ಯಲಬುರ್ಗಾ ಕಾಂಗ್ರೆಸ್ ಎಸ್ ಸಿ ಎಸ್ ಘಟಕ ಪ್ರತಿಭಟನೆ

ಮೀಸಲಾತಿ ವಿಳಂಬ : ಯಲಬುರ್ಗಾ ಕಾಂಗ್ರೆಸ್ ಎಸ್ ಸಿ ಎಸ್ ಘಟಕ ಪ್ರತಿಭಟನೆ

ಯಲಬುರ್ಗಾ : ರಾಜ್ಯ ಸರ್ಕಾರದ ಮೀಸಲಾತಿ ವಿಳಂಬ ನೀತಿ ವಿರೋಧಿಸಿ ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಎಸ್ ಸಿ ಎಸ್ ಟಿ ಘಟಕ ಪ್ರತಿಭಟನೆ ಮಾಡಿತು.

ಯಲಬುರ್ಗಾ ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಎಸ್ ಸಿ ಎಸ್ ಟಿ ಘಟಕದ ಪದಾಧಿಕಾರಿಗಳು, ಮುಖಂಡರು ರಾಜ್ಯ ಸರ್ಕಾರದ ಮೀಸಲಾತಿ ದೋರಣೆ ವಿರೋಧಿಸಿ ಪ್ರತಿಭಟನೆ ಮಾಡಿದರು.
ಎಸ್ ಟಿ ಘಟಕದ ಅಧ್ಯಕ್ಷ ಮಾನಪ್ಪ ಪೂಜಾರ್ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳದ ನೆಪದಲ್ಲಿ ದಲಿತರಿಗೆ ಮೋಸ ಮಾಡುತ್ತಿದೆ, ಎಸ್ ಸಿ ಎಸ್ ಟಿ ಪಂಗಡಕ್ಕೆ ಕೋಟ್ಯರುವ ಮೀಸಲಾತಿ ಇನ್ನೂ ಅಧಿಕೃತ ಗೊಂಡಿಲ್ಲ, ಕೇವಲ ಗೆಜೆಟ್ ಪಾಸ್ ಮಾಡಿದರೆ ಸಾಲದು, ಮೀಸಲಾತಿ ವಿಧೇಯಕ ಸಂಸತ್ ನಲ್ಲಿ ಅನುಮೋದನೆ ಪಡೆಯಬೇಕು, ಮೀಸಲಾತಿ ಹೆಚ್ಚಳದ ಜಾರಿ ಇನ್ನೂ ಆಗಿಲ್ಲ.
ಇಷ್ಟೆಲ್ಲಾ ಪ್ರಕ್ರಿಯೆಗಳು ಬಾಕಿ ಇದ್ದರೂ ರಾಜ್ಯ ಬಿಜೆಪಿ ಸರ್ಕಾರ ಮೀಸಲಾತಿ ವಿಷಯದಲ್ಲಿ ಗೊಂದಲ ಸೃಷ್ಟಿಸಿ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆದಿದೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಯಲಬುರ್ಗಾ ಎಸ್ ಸಿ ಘಟಕದ ಅಧ್ಯಕ್ಷ ಶಿವಾನಂದ್, ಕುಕನೂರ್ ಘಟಕದ ಅಧ್ಯಕ್ಷ ಈಶಪ್ಪ ದೊಡ್ಡಮನಿ ಸೇರಿದಂತೆ ಇತರ ಪದಾಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಯಿತು.


ವರದಿ : ಈರಯ್ಯ ಕುರ್ತಕೋಟಿ
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">