'ಜೊತೆಯಾಗಿ ಹಿತವಾಗಿ' ಸಿನಿಮಾ ನಾಳೆ ತೆರೆಗೆ
ಹಳ್ಳಿ ಪ್ರತಿಭೆ ಎ ಆರ್ ಕೃಷ್ಣ ಚೊಚ್ಚಲ ನಿರ್ದೇಶನದ ಮೂಲಕ ಚಂದನವನದಲ್ಲಿ ಅದೃಷ್ಟ ಪರೀಕ್ಷೆ
ಕುರುಗೋಡು ತಾಲೂಕಿನ ಸಮೀಪದ ಮುಷ್ಠಗಟ್ಟೆ ಗ್ರಾಮದ ರೈತ ಕುಟುಂಬದ ಅಪಟ್ಟ ಹಳ್ಳಿ ಪ್ರತಿಭೆ ಎ ಆರ್ ಕೃಷ್ಣ ಚೊಚ್ಚಲ ನಿರ್ದೇಶನದ ಚಿತ್ರ 'ಜೊತೆಯಾಗಿ ಹಿತವಾಗಿ' ಸಿನಿಮಾ ಎರಡು ವರ್ಷಗಳ ಚಿತ್ರಿಕರಣ ಬಳಿಕ ನಾಳೆ ಸೆಪ್ಟೆಂಬರ್ 19ರಂದು ಶುಕ್ರವಾರ ರಾಜ್ಯದಾದ್ಯಂತ ಬಿಗ್ ಸ್ಕ್ರೀನ್ ಗಳಲ್ಲಿ ತೆರೆ ಕಾಣಲಿದ್ದು ಈ ಮೂಲಕ ಚಂದನವನದಲ್ಲಿ ಯುವ ನಿರ್ದೇಶಕನ ಅದೃಷ್ಟ ಪರೀಕ್ಷೆ ಹಾಗೂ ಪ್ರೇಕ್ಷಕರ ಫಲಿತಾಂಶಕ್ಕೆ ಚಿತ್ರ ತಂಡ ಕೂತುಹಲದಿಂದ ಕಾಯುತ್ತಿದೆ.
ನವಿರದ ಪ್ರೇಮಕಥೆ ಜೊತೆ ತಂದೆ ಮಗನ ಸೆಂಟಿಮೆಂಟ್ ಸಿನಿಮಾ ಹೈಲೈಟ್...
ಪ್ರೇಮಕಥೆ ಜೊತೆಗೆ ಅಪ್ಪ-ಮಗನ ಬಾಂಧವ್ಯ ಬೇಸುಗೆ ಚಿತ್ರದಲ್ಲಿ ಇದ್ದು 'ಜೊತೆಯಾಗಿ ಹಿತವಾಗಿ'. ನಟ ಶಿವರಾಜಕುಮಾರ್ ಅವರ ಮೊದಲ 'ಆನಂದ್' ಸಿನಿಮಾದ ಹಾಡಿನ ಸಾಲು, ಇದೀಗ ಇದೇ ಹೆಸರಿನಲ್ಲಿ ಸಿನಿಮಾವೊಂದು ಸದ್ದಿಲ್ಲದೇ ಪೂರ್ಣಗೊಂಡು, ರಿಲೀಸ್‌ಗೆ ರೆಡಿಯಾಗಿದೆ. ಇದೇ ಶುಕ್ರವಾರ ಚಿತ್ರ ತೆರೆಗೆ ಬರಲಿದ್ದು, ಅದಕ್ಕೂ ಒಂದು ವಾರ ಮುನ್ನವೇ ಪ್ರೀಮಿಯರ್ ಶೋ ನಡೆಸಲಾಗಿದೆ.
ಕಥೆಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯ ದೊರೆತಿದ್ದು, ಅದೇ ಖುಷಿ ಮತ್ತು ಧೈರ್ಯದಲ್ಲಿ ಚಿತ್ರತಂಡ ತೆರೆಗೆ ಬರಲು ಸಿದ್ಧತೆ ನಡೆಸಿದೆ. ಎ ಆರ್ ಕೃಷ್ಣ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದು:
"ನಮ್ಮ ಚೊಚ್ಚಲ ಚಿತ್ರ ನೋಡಿ ಪ್ರೋತ್ಸಾಹಿಸಿ" — ಎ ಆರ್ ಕೃಷ್ಣ, ನಿರ್ದೇಶಕ, ಮುಷ್ಠಗಟ್ಟೆ
"ಮನೆಯಲ್ಲಿ ತುಂಬ ಫ್ರೀಡಂ ಕೊಟ್ಟರೆ ಏನಾಗುತ್ತೆ? ಅಥವಾ ತುಂಬ ಸ್ಟ್ರಿಕ್ಟ್ ಆಗಿದ್ದರೆ ಏನಾಗುತ್ತೆ? ಎಂಬುದರ ಸುತ್ತ ಸಾಗುವ ಕಥೆಯಿದು. ಮೊದಲು ಕಿರುಚಿತ್ರ ಮಾಡೋಣ ಅಂತ ಅಂದುಕೊಂಡಿದ್ದೆವು. ಆದರೆ, ಕೆಲಸ ಪ್ರಾರಂಭಿಸಿದ ಬಳಿಕ ಸಿನಿಮಾನೇ ಮಾಡಿದರೆ ಉತ್ತಮ ಅಂತ ಅನ್ನಿಸಿ, ರಿಶೂಟ್ ಮಾಡಿದೆವು."
ಬೆಳಗಾವಿ ಮೂಲದ ಅಗಸ್ತ ಕೆಲ ಸಿನಿಮಾಗಳಲ್ಲಿ ತಾಂತ್ರಿಕ ತಂಡದಲ್ಲಿ ಕೆಲಸ ಮಾಡಿ ಅನುಭವ ಪಡೆದು, ಈ ಚಿತ್ರದಲ್ಲಿ ನಾಯಕನಾಗಿ ಪದಾರ್ಪಣೆ ಮಾಡಿದ್ದಾರೆ. ಅವರಿಗೆ ಸುವಾರ್ತಾ ನಾಯಕಿಯಾಗಿದ್ದಾರೆ.
ಚಿತ್ರ ತಂಡದ ವಿವರಗಳು
- ಬರವಣಿಗೆ / ಸಂಕಲನ / ನಿರ್ದೇಶನ: ಎ ಆರ್ ಕೃಷ್ಣ
- ನಿರ್ಮಾಣ: ಶ್ರೀ ರತ್ನ ಫಿಲ್ಮ್ ಕಂಪನಿ
- ತಾರಾಗಣ: ಅಗಸ್ತ್ಯ, ಸುವಾರ್ತ, ಆನಂದ್ ನೀನಾಸಂ, ಚೇತನ್ ದುರ್ಗಾ, ಭೂಮಿಕಾ ದೇಶಪಾಂಡೆ ಮತ್ತಿತರರು
- ಛಾಯಾಗ್ರಹಣ: ಪ್ರಸಾದ್ ನಾಯಕ್
- ಸಂಗೀತ: ಜಯಪಾಲ್
- ಹಿನ್ನೆಲೆ ಸಂಗೀತ: ಆನಂದ್ ರಾಜವಿಕ್ರಮ
ವರದಿ : ಅಣ್ಣಯ್ಯ ಸ್ವಾಮಿ, ಸಿದ್ದಿ ಟಿವಿ, ಕುರುಗೋಡು