ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಡಾಕ್ಟರ್ ಮಂಜುನಾಥ ಅಣಗೌಡರ್
ಸಿಂಧನೂರು ತಾಲೂಕಿನ ತುರವಿಹಾಳ ಪಟ್ಟಣ ದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಮಾಡಲಾಯಿತು.
ಡಾಕ್ಟರ್ ಮಂಜುನಾಥ್ ಅಣಗೌಡರ್ ಆಯುಷ್ಯ ವೈದ್ಯಾಧಿಕಾರಿಗಳು ಮಾತನಾಡಿ ಡೆಂಗಿ ವೈರಸ್ ನಿಂದ ಉಂಟಾಗುತ್ತದೆ ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಸೊಳ್ಳೆ ಡೆಂಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ಜ್ವರವು ರಕ್ತ ಪರೀಕ್ಷೆಯಿಂದ ಮಾತ್ರ ಪತ್ತೆ ಹಚ್ಚಬಹುದು ಇದರ ಲಕ್ಷಣಗಳೆಂದರೆ ತೀವ್ರ ಜ್ವರ,ವಿಪರೀತ ತಲೆನೋವು ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸ ಖಂಡಗಳಲ್ಲಿ ಮತ್ತು ಕೀಲುಗಳಲ್ಲಿ ವಿಪರೀತ ನೋವು, ವಾಕರಿಕೆ, ವಾಂತಿ ಈ ಲಕ್ಷಣ ಕಂಡು ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು, ಸಾಸಿವೆ, ಬೆಳ್ಳುಳ್ಳಿ ಸಿಪ್ಪೆಯಿಂದ ಮನೆಯಲ್ಲಿ ಧೂಪವನ್ನು ಹಾಕಬೇಕು, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಎಂದು ಹೇಳಿದರು
ನಂತರ ಜಯಲಕ್ಷ್ಮಿ ಹಿರಿಯ ಮಹಿಳಾ ನಿರೀಕ್ಷಣಾಧಿಕಾರಿ ಮಾತನಾಡಿ ನಿಮ್ಮ ಮನೆಯ ಸುತ್ತಮುತ್ತ ಶುಚಿಯಾಗಿಡಿ, ನೀರಿನ ಪರಿಕರಗಳನ್ನು ವಾರಕ್ಕೆ ಒಂದು ಸಾರಿ ಶುಚಿಗೊಳಿಸಿ ನೀರನ್ನು ಸಂಗ್ರಹಿಸಬೇಕು ಹಾಗೂ ಶೇಖರಣೆಗಳನ್ನು ಮುಚ್ಚಬೇಕು, ಕಡ್ಡಾಯವಾಗಿ ಸೊಳ್ಳೆ ಪರದೆಗಳನ್ನು ಉಪಯೋಗಿಸಬೇಕು ಎಂದರು
ಈ ಸಂದರ್ಭದಲ್ಲಿ ಡಾ.ಶ್ರೀದೇವಿ ಗ್ರಾಮೀಣ ಸೇವೆ ವೈದ್ಯರು, ಯಮನೂರ್ ಏನ.ಟಿ.ಇ.ಪಿ ಸಿಂಧನೂರ್, ಮೋದಿನಬಿ, ಎಲ್ಲಮ್ಮ,ಪರಮೇಶ್ವರ್, ಶರಣಬಸವ,ಆಶಾಕಾರ್ಯಕರ್ತರು ಇದ್ದರು.
ವರದಿ : ಮೆಹಬೂಬ್ ಮೊಮಿನ್