Kampli:ಕಂಪ್ಲಿಯ ಡಿಪ್ಲೋಮಾ ಕಾಲೇಜು ಬಳಿ ರಸ್ತೆ ಅಪಘಾತ


ಕಂಪ್ಲಿಯ ಡಿಪ್ಲೋಮಾ ಕಾಲೇಜು ಬಳಿ ರಸ್ತೆ ಅಪಘಾತ

ಕಂಪ್ಲಿ : ನಗರದ ಮುದ್ದಾಪುರ ಬೈ ಪಾಸ್ ರಸ್ತೆಯ ಡಿಪ್ಲೋಮಾ  ಕಾಲೇಜು ಬಳಿ ಯುವಕನೊರ್ವ ಎದುರಿಗೆ ಬರುತ್ತಿದ್ದ ಎಮ್ಮೆಗೆ ಬೈಕ್ ಢಿಕ್ಕಿ ಹೊಡೆದು ಅಪಘಾತಕ್ಕೆ ಸಿಲುಕಿದ ಘಟನೆ ಕಂಪ್ಲಿಯಲ್ಲಿ ನಡೆದಿದೆ.

ಇಂದು ಬೈಕ್ ನಲ್ಲಿ ಹೋಗುತ್ತಿದ್ದ ಯುವಕನಿಗೆ ಎದುರಾಗಿ ಎಮ್ಮೆಯೊಂದು ಎದುರು ಬಂದಿದ್ದು, ಎಮ್ಮೆಗೆ ಢಿಕ್ಕಿ ಹೊಡೆದಿದ್ದಾನೆ, ಬೈಕ್ ನ ಆಯಾ ತಪ್ಪಿ ಬಿದ್ದ ಯುವಕನ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು, ಸ್ಥಳದಲ್ಲಿದ್ದ ಜನರು 108 ಅಂಬ್ಯೂಲೇನ್ಸ್ ಗೆ ಕರೆ ಮಾಡಿ, ಅಂಬ್ಯೂಲೇನ್ಸ್ ನ ಮೂಲಕ ಗಾಯಾಳುವನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿತು.

ಗಾಯಾಳು ಕಂಪ್ಲಿ ತಾಲೂಕಿನ  ಜಾಯಿನೂರಿನ ಯುವಕ ಎಂದು ತಿಳಿದು ಬಂದುದ್ದು,  ಸದ್ಯ ಕಂಪ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">