Kampli :ಮಾರ್ಚ್ 01 ಕ್ಕೆ ರಾಜ್ಯ ಸರ್ಕಾರಿ ನೌಕರರ ಮುಷ್ಕರ

ಕಂಪ್ಲಿ  :  ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೋಳಿಸಲು ಸರ್ಕಾರವನ್ನು ಆಗ್ರಹಿಸಿ ಬರುವ ಮಾರ್ಚ್ ಒಂದುರಿಂದ ಅನಿರ್ಧಷ್ಟವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಂಪ್ಲಿ  ತಾಲೂಕು ಅಧ್ಯಕ್ಷರು ಗಿರೀಶ್ ಬಾಬು ಗುರವಾರ ನಗರದ ಕರ್ನಾಟಕ ರಾಜ್ಯ ನೌಕರರ ಸಂಘದ ಕಚೇರಿಯಲ್ಲಿ ಕರ್ನಾಟಕ ರಾಜ್ಯ ನೌಕರ ಸಂಘದ ಕಂಪ್ಲೀಟ್ ತಾಲೂಕು ಅಧ್ಯಕ್ಷ ಗಿರೀಶ್ ಬಾಬು ಮಾತನಾಡಿದರು.
ರಾಜ್ಯದ ಸಮಸ್ತ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರಕ್ಕೆ ಸಾಥ್ ನೀಡುತ್ತಾರೆ ಎಂದರು.

ಏಳನೇ ವೇತನ ಆಯೋಗದ ಮಧ್ಯಂತರ ವರದಿ ಪಡೆದು 2022ರ ಜುಲೈ 1ರಿಂದ ಅನ್ವಯಿಸಿ ಶೇ 40 ಫಿಟ್ಮೆಂಟ್ ಬಿಡುಗಡೆ ಹಾಗೂ ಹೊಸಪಿಂಚಿಣಿ ಯೋಜನೆ (ಎನ್ ಪಿ ಎಸ್ ) ರದ್ದುಪಡಿಸುವ ತೀರ್ಮಾನವನ್ನು ಸರ್ಕಾರ ಕೈಗೊಳ್ಳಬೇಕೆಂದರು.
ವೇತನ ಆಯೋಗದ ಶಿಫಾರಸು ತಡವಾಗುವುದರಿಂದ ಕೂಡಲೇ ಮದ್ಯಂತರ ವರದಿ ಪಡೆದು ನೌಕರರ ಹಿತರಕ್ಷಣೆ ಮಾಡಬೇಕು.

ಜತೆಗೆ ರಾಜಸ್ತಾನ್, ಛತೀಶ್ ಗಡ್, ಜಾರ್ಖ0ಡ್, ಪಂಜಾಬ್, ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಎನ್ ಪಿ ಎಸ್ ರದ್ದು ಗೊಳಿಸಿ ಹಳೆ ಪೆನ್ಷನ್ ಯೋಜನೆ ಜಾರಿಗೆ ತಂದಿರುವಂತೆ ಕರ್ನಾಟಕದಲ್ಲಿಯೂ ಅನುಷ್ಠಾನಕ್ಕೆ ತರಬೇಕೆಂದರು.
 ಈ ಸಂದರ್ಭದಲ್ಲಿ  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಂಪ್ಲಿ ತಾಲೂಕು ಅಧ್ಯಕ್ಷರು ಗಿರೀಶ್ ಬಾಬು. ಪಿ ಬಸವರಾಜ್   ಬಸವರಾಜ್ ಕೆ ವೀರೇಶ್. ವೀರೇಶ್ ಟಿ ಎಚ್ ಎಂ  ಬಸವರಾಜ್ ರೇಣುಕಮ್ಮ ಹನುಮಂತಪ್ಪ ಕರ್ನಾಟಕ ರಾಜ್ಯ ನೌಕರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

ರೀಫೋರ್ಟರ್ : ಚನ್ನಕೇಶವ 
Previous Post Next Post

Contact Form

f="https://unpkg.com/video.js/dist/video-js.css" rel="stylesheet">