RR War : 'ಡಿಕೆ ರವಿ ಕೊನೆಯ ಮೆಸೇಜ್‌ ಆಧರಿಸಿ ರೋಹಿಣಿ ವಿರುದ್ಧ ತನಿಖೆ ಮಾಡಿ'

ರಾಜ್ಯದಲ್ಲಿ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಹಾಗು ಐಪಿಎಸ್‌ ಅಧಿಕಾರಿ ಡಿ. ರೂಪಾ ಅವರ ನಡುವಿನ ಬೀದಿ ರಂಪಾಟ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಸದ್ಯ ಈ ವಿವಾದ ಕೋರ್ಟ್‌ನಲ್ಲಿದೆ. ಈ ನಡುವೆ ಡಿಕೆ ರವಿ ಅವರು ರೋಹಿಣಿ ಸಿಂಧೂರಿಗೆ ಕಳಿಸಿದ ಕೊನೆಯ ಮೆಸೇಜ್‌ ಆಧಾರದಲ್ಲಿ ರೋಹಿಣಿ ವಿರುದ್ಧ ತನಿಖೆ ನಡೆಸುವಂತೆ ಆಗ್ರಹ ಕೇಳಿಬಂದಿದೆ.


ನೆಲಮಂಗಲ (ಫೆ.24): ರಾಜ್ಯದಲ್ಲಿ ಐಪಿಎಸ್‌ ಹಾಗೂ ಐಎಎಸ್‌ ಅಧಿಕಾರಿಗಳ ನಡುವಿನ ಜಗಳ ಶುಕ್ರವಾರದ ವೇಳೆ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ. ಶುಕ್ರವಾರ ಈ ಪ್ರಕರಣದಲ್ಲಿ ಯಾವುದೇ ಬೆಳವಣಿಗೆಯಾಗಿಲ್ಲ. ರೂಪಾ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದ ರೋಹಿಣಿ ಸಿಂಧೂರಿ, ತಮ್ಮ ವಿರುದ್ಧ ಮಾನಹಾನಿಕರ ಮಾತನಾಡದಂತೆ ಕೋರ್ಟ್‌ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದರು. ಇದರ ವಿಚಾರಣೆ ನಡೆಸಿದ್ದ ಸಿಟಿ ಸಿವಿಲ್‌ ಕೋರ್ಟ್‌, ರೂಪಾ ಅವರಿಗೆ ಸಮನ್ಸ್‌ ಜಾರಿ ಮಾಡಿದ್ದು, ಅವರಿಂದಲೂ ಉತ್ತರ ಕೇಳಿದೆ. ಇದಕ್ಕೆ ಕೋರ್ಟ್‌ಗೆ ಕೃತಜ್ಞತೆ ಸಲ್ಲಿಸಿರುವ ಡಿ. ರೂಪಾ, ತಮ್ಮ ಕಡೆಯ ವಾದವನ್ನು ಆಲಿಸಲು ಕೋರ್ಟ್‌ ಒಪ್ಪಿರುವುದಕ್ಕೆ ಸಂತಸವಾಗಿದೆ ಎಂದು ಹೇಳಿದ್ದಾರೆ. ಈ ನಡುವೆ. ಡಿ ಕೆ ರವಿಯ ಕೊನೆಯ ಸಂದೇಶದ ಆಧಾರದ ಮೇಲೆ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆಗ್ರಹಿಸಿ ನೆಲಮಂಗಲ ತಾಲೂಕಿನ ಯುವ ಕಾಂಗ್ರೆಸ್ ಅಧ್ಯಕ್ಷ ನಾರಾಯಣ ಗೌಡ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಕಾನೂನು ವಿಭಾಗದ ಅಧ್ಯಕ್ಷರಾದ ಸೋಮಶೇಖರ್ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ರೂಪಾ ಹಾಗೂ ರೋಹಿಣಿ ಸಿಂಧೂರಿ ನಡುವಿನ ಬೀದಿಜಗಳದಲ್ಲಿ ಪದೇ ಪದೇ ಕೇಳಿ ಬರುತ್ತಿದ್ದ ಇನ್ನೊಂದು ಹೆಸರು ಮಾಜಿ ಐಎಎಸ್ ಅಧಿಕಾರಿ ದಿವಂಗತ ಡಿಕೆ ರವಿ ಅವರದ್ದು. 2015 ಮೇ ತಿಂಗಳಿನಲ್ಲಿ ಬೆಂಗಳೂರಿನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಡಿಕೆ ರವಿ ಆತ್ಮಹತ್ಯೆಗೆ ಶರಣಾಗಿದ್ದರು. ಆ ವೇಳೆ ಇದನ್ನು ಮರಳು ಮಾಫಿಯಾದ ಕಾರಣದಿಂದ ಸರ್ಕಾರವೇ ಮಾಡಿಸಿದ್ದ ಕೊಲೆ ಎನ್ನುವ ಆರೋಪ ಕೇಳಿಬಂದಿತ್ತು. ಕೊನೆಗೆ ಮಹಿಳಾ ಐಎಎಸ್‌ ಅಧಿಕಾರಿಯ ಜೊತೆಗೆ ಅವರಿಗೆ ಪ್ರೀತಿಯಿತ್ತು ಇದನ್ನು ನಿರಾಕರಿಸಿದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎನ್ನಲಾಗಿತ್ತು. ಕೊಲೆಯ ತನಿಖೆ ಮಾಡಿದ್ದ ಸಿಬಿಐ ಕೂಡ, ಮಹಿಳಾ ಐಎಎಸ್ ಅಧಿಕಾರಿಯ ಜೊತೆಗೆ ಪ್ರೇಮಸಲ್ಲಾಪ ಇದ್ದಿದ್ದನ್ನು ಸ್ಪಷ್ಟಪಡಿಸಿತ್ತಾದರೂ, ಇದನ್ನು ಕೊಲೆ ಎಂದು ಹೇಳಿರಲಿಲ್ಲ.

ಡಿಕೆ ರವಿ ಅವರ ಕೊನೆಯ ಸಂದೇಶ ಏನು:

ಸಾಯುವ ದಿನ ಬೆಳಗ್ಗೆ 11.05ಕ್ಕೆ ರವಿ ವಾಟ್ಸಾಪ್‌ನಲ್ಲಿ ಕಳಿಸಿದ ಮೆಸೇಜ್‌ ಹೀಗಿತ್ತು: 'ಹೇ ಬೇಬಿ, ಬಹುಶಃ ನನ್ನ ಕಡೆಯಿಂದ ನಿನಗೆ ಇದು ಕೊನೆಯ ಮೆಸೇಜ್‌ ಎಂದುಕೊಳ್ಳುತ್ತೇನೆ. ನನ್ನ ಕೊನೆಯ ಆಸೆ ಏನೆಂದರೆ ನಿನ್ನನ್ನು ನೋಡುವುದು ಮತ್ತು ನಿನಗೆ ಮುತ್ತಿಡುವುದು. ಆದರೆ, ಅದರಿಂದ ನನಗೆ ತೃಪ್ತಿಯಾಗುವುದಿಲ್ಲ. ಹಾಗಾಗಿ ನೀನು ನನ್ನ ಸಾವಿನ ಬಗ್ಗೆ ಸುದ್ದಿ ಕೇಳಿದ ತಕ್ಷಣವೇ ಬಂದು ನನ್ನನ್ನು ತಬ್ಬಿಕೊಳ್ಳಿ. ನನಗೆ ಆಗ ಮುತ್ತಿಟ್ಟು, ಶಿವ ನನಗೆ ಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸಿಕೊಳ್ಳಿ...!' ಎಂದು ಬರೆದಿದ್ದರು. ಆದರೆ, ಅವರ ಡಿಕೆ ರವಿ ಅವರ ಕುಟುಂಬ ಈ ಸಂದೇಶಗಳ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿತ್ತು.

2015ರ ಮಾರ್ಚ್‌ 15 ರಂದು ಸಂಜೆ 4.25ರ ವೇಳೆಗೆ ಕಳಿಸಿದ ಸಂದೇಶದಲ್ಲಿ, 'ಇಂದು ನಾನು ಕೆಲವು ಅಘಾತಕಾರಿ ನಿರ್ಧಾರಗಳನ್ನು ತೆಗೆದುಕೊಂಡ ಕೆಟ್ಟ ದಿನವಾಗಿದೆ. ನೀವು ನನಗೆ ಸರಿಯಾಗಿ ಮಾರ್ಗದರ್ಶನ ನೀಡುತ್ತೀರಿ ಎಂದು ನಂಬಿದ್ದೇನೆ. ನಿಮ್ಮ ಕರೆ ಮತ್ತು ಆಹ್ವಾನಕ್ಕಾಗಿ ರಾತ್ರಿ 9 ಗಂಟೆಯವರೆಗೂ ನಾನು ಕಾಯುತ್ತೇನೆ' ಎಂದು ರವಿ ಅವರು ಬರೆದಿದ್ದರು.

ಅದಾದ ಬಳಿಕ ಸಂಜೆ 5.20ಕ್ಕೆ ಇನ್ನೊಂದು ಸಂದೇಶವನ್ನು ರವಿ ಕಳಿಸಿದ್ದರು. ಅದರಲ್ಲಿ, 'ಮತ್ತೆ ಕರೆಮಾಡಬೇಡಿ ಅಥವಾ ಮಾತನಾಡಲು ಪ್ರಯತ್ನಿಸಬೇಡಿ ಅಥವಾ ನನ್ನ ಪ್ರೀತಿಯ ಬಗ್ಗೆ ಯಾರೊಬ್ಬರೊಂದಿಗೆ ಮಾತನಾಡಬೇಡಿ. ಹಾಗೇನಾದರೂ ಮುಂದಿನ ಜನ್ಮ ಅಂತದ್ದೇನಾದರೂ ಇದ್ದರೆ, ನಾವಿಬ್ಬರೂ ಜೊತೆಯಾಗೋಣ. ನಾನು ಹೊರಡುತ್ತಿದ್ದೇನೆ' ಎಂದು ಬರೆಯಲಾಗಿತ್ತು.

7 ಗಂಟೆಯ ವೇಳೆಗೆ ಮಹಿಳಾ ಅಧಿಕಾರಿಯಿಂದ ಈ ಮೆಸೇಜ್‌ಗೆ ಪ್ರತಿಕ್ರಿಯೆ ಬಂದಿತ್ತು. 'ಮೂರ್ಖರ ಹಾಗೆ ವರ್ತಿಸಬೇಡಿ. ನಿಮ್ಮೊಂದಿಗೆ ನಾನು ಮಾತನಾಡಬಾರದು ಎಂದು ನೀವು ನಿರೀಕ್ಷೆ ಮಾಡ್ತಿದ್ದೀರಾ ಅನ್ನೋದನ್ನ ಸ್ಪಷ್ಟವಾಗಿ ಹೇಳಿದೆ. ನಾನು ಕರೆ ಮಾಡೋದಿಲ್ಲ. ಏನಿದೆಲ್ಲ ನಿಮ್ಮ ಮೂರ್ಖತನದ ವರ್ತನೆ' ಎಂದು ಬರೆಯಲಾಗಿತ್ತು. ರವಿಯ ಸ್ವರ ಮತ್ತು ಭಾಷೆಯಲ್ಲಿನ ಬದಲಾವಣೆಯಿಂದಾಗಿ ತಾನು ಆರಂಭದಲ್ಲಿ ಇದರಿಂದ ದೂರವಿದ್ದೆ ಎಂದು ತನಿಖಾ ಸಂಸ್ಥೆಗಳಿಗೆ ಈ ಹಿಂದೆ ತಿಳಿಸಿದ್ದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">