BREAKING-ಇಂದಿನಿಂದ ಮಾದರಿ ನೀತಿ ಸಂಹಿತೆ : ದಿಡೀರನೇ ಸಿ. ಎಂ ಎಲ್ಲಾ ಕಾರ್ಯಕ್ರಮ ರದ್ದು

ಇಂದಿನಿಂದ ಮಾದರಿ ನೀತಿ ಸಂಹಿತೆ :  ದಿಡೀರನೇ ಸಿ. ಎಂ ಎಲ್ಲಾ ಕಾರ್ಯಕ್ರಮ ರದ್ದು

ಕುಕನೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು 29 ರಂದು ಮದ್ಯಾಹ್ನ 11.30 ಕ್ಕೆ ಕೇಂದ್ರ ಚುನಾವಣೆ ಆಯೋಗದಿಂದ ದಿನಾಂಕ ಘೋಷಣೆ ಅಗಲಿದ್ದು, ಇಂದಿನಿಂದಲೇ ಮಾದರಿ ನೀತಿ ಸಂಹಿತೆ ( code of condust ) ಜಾರಿಗೆ ಬರಲಿದೆ.

ಹೀಗಾಗಿ ಸಿ ಎಂ ಬೊಮ್ಮಾಯಿ ಅವರ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ರದ್ದಾಗಿವೆ ಎಂದು ತಿಳಿದು ಬಂದಿದೆ.

ಪೂರ್ವ ನಿಗದಿಯಂತೆ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ದಲ್ಲಿ ಕೆರೆ ತುಂಬಿಸುವ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮ ನಡೆಯಬೇಕಿತ್ತು . ಆದರೆ ಕೇಂದ್ರ ಚುನಾವಣೆ ಆಯೋಗದ ಸುದ್ದಿಗೋಷ್ಠಿ ಹಿನ್ನೆಲೆ, ಮಾದರಿ ನೀತಿ ಸಂಹಿತೆ ಜಾರಿ ಅಗಲಿದ್ದು ಮುಖ್ಯಮಂತ್ರಿ, ಸಚಿವರು, ಶಾಸಕರ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ರದ್ದಾಗಿವೆ ಎಂದು ತಿಳಿದುಬಂದಿದೆ.
Previous Post Next Post

Contact Form

f="https://unpkg.com/video.js/dist/video-js.css" rel="stylesheet">