ರೈನ್ ಬೋ ಪಿಯು ಕಾಲೇಜಿನ ವಿದ್ಯಾರ್ಥಿಗಳ ಕ್ರೀಡಾ ಸಾಧನೆ
ಕಂಪ್ಲಿ : ತಾಲೂಕು ಮಟ್ಟದ ಪಿಯು ಕಾಲೇಜು ಕ್ರೀಡಾಕೂಟದಲ್ಲಿ ರೈನ್ ಬೋ ಪಿಯು ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ತೋರಿಬಿಟ್ಟು ಮಿಂಚಿದ್ದಾರೆ. ಒಟ್ಟು 6 ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವುದು ಕಾಲೇಜಿನ ಹೆಮ್ಮೆಯ ಸಂಗತಿ.
ಪ್ರಶಸ್ತಿ ವಿವರಗಳು:
- ಚೆಸ್ (ಗಂಡು ಹಾಗೂ ಹೆಣ್ಣು ವಿಭಾಗ) – ಪ್ರಥಮ ಸ್ಥಾನ
- ಶಟಲ್ ಬ್ಯಾಡ್ಮಿಂಟನ್ (ಗಂಡು ಹಾಗೂ ಹೆಣ್ಣು ವಿಭಾಗ) – ಪ್ರಥಮ ಸ್ಥಾನ
- ಡಿಸ್ಕಸ್ ಥ್ರೋ (ಗಂಡು ವಿಭಾಗ) – ದ್ವಿತೀಯ ಸ್ಥಾನ
- ಥ್ರೋ ಬಾಲ್ – ದ್ವಿತೀಯ ಸ್ಥಾನ
- ವಾಲಿಬಾಲ್ (ಹೆಣ್ಣು ವಿಭಾಗ) – ದ್ವಿತೀಯ ಸ್ಥಾನ
- 100 ಮೀ. ಓಟ (ಗಂಡು ವಿಭಾಗ) – ತೃತೀಯ ಸ್ಥಾನ
ಈ ಸಾಧನೆಯ ಹಿನ್ನೆಲೆಯಲ್ಲಿ ಕಾಲೇಜಿನ ಕಾರ್ಯದರ್ಶಿ ಕೆ.ಎಸ್. ಚಾಂದ್ ಬಾಷಾ, ಅಧ್ಯಕ್ಷ ಶಾರೂಕ್, ಅಕಾಡೆಮಿ ನಿರ್ದೇಶಕ ಅಜೀಜ್, ಪ್ರಿನ್ಸಿಪಲ್ ಶ್ರೀನಿವಾಸ್, ಉಪ ಪ್ರಾಂಶುಪಾಲ ಸಂಶೇರ್, ಮುಖ್ಯಗುರು ಮೇಘ ಸೇರಿದಂತೆ ಶಿಕ್ಷಕರ ವೃಂದ ಸಂತೋಷ ವ್ಯಕ್ತಪಡಿಸಿದ್ದಾರೆ.