ಆನೆಗೊಳ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಶ್ರೀಮತಿ ರಂಜಿತ ಸುರೇಶ್ ಆವಿರೋಧವಾಗಿ ಆಯ್ಕೆ
ಕೃಷ್ಣರಾಜಪೇಟೆ : ತಾಲ್ಲೂಕಿನ ಗಡಿಭಾಗವಾಗ ಆನೆಗೊಳ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರ ಸ್ಥಾನ ತೆರವಾಗಿದ್ದ ಹಿನ್ನೆಲೆ ಇಂದು ಚುನಾವಣೆ ನಿಗದಿಯಾಗಿತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ರಂಜಿತ ಸುರೇಶ್ ರವರನ್ನು ಹೊರತು ಪಡಿಸಿ ಮತ್ಯಾರು ನಾಮ ಪತ್ರ ಸಲ್ಲಿಸದ ಕಾರಣ ರಂಜಿತ ರವರನ್ನು ನೂತನ ಉಪಾದ್ಯಕ್ಷರೆಂದು ಚುನಾವಣೆ ಅಧಿಕಾರಿ ಘೋಷಿಸಿದ್ರು ..
ನಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ ಕಿರಣ್ ಮಾತನಾಡಿ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದ ಅಭಿವೃದ್ಧಿ ಕುಡಿಯುವ ನೀರು, ಬೀದಿ ದೀಪ, ಚರಂಡಿ ಸ್ವಚ್ಚತೆ, ಮತ್ತು ರಾಷ್ಟ್ರೀಯ ಮಹಾತ್ಮ ಗಾಂಧಿ ಯೋಜನೆ ಕೆಲಸಗಳ ಬಗ್ಗೆ ಹೆಚ್ಚು ಹೊತ್ತು ನೀಡಿ ಗ್ರಾಮಗಳ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವಂತೆ ಸಲಹೆ ನೀಡಿದ್ರು
ಈ ಸಂದರ್ಭದಲ್ಲಿ ಹೇಮಾವತಿ ಸಕ್ಕರೆ ಕಾರ್ಖಾನೆ ಮಾಜಿ ನಿರ್ದೇಶಕ ಬಿ.ಎಸ್ ಮಂಜುನಾಥ್, ನಿವೃತ್ತ ಶಿಕ್ಷಕ ರಾಮೇಗೌಡ್ರು, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಚಿಕ್ಕತರಹಳ್ಳಿ ಮಧು, ಮುಖಂಡರಾದ ಶಿಶುಪಾಲು, ವಿಶ್ವನಾಥ್, ಗ್ರಾಮ ಪಂಚಾಯತಿ ಸದಸ್ಯರುಗಳಾದ ರಮೇಶ್, ಅನುಸೂಯಾ , ಜಗನ್ನಾತ್, ಧನಲಕ್ಷ್ಮಿ , ರುಕ್ಮಣಿ , ನಂಜೇಶ್, ನಾಗಮ್ಮ, ರಕ್ಷಿತ್,ಪ್ರಕಾಶ್, ಗಂಗಾಧರ್, ಯೋಗೇಶ್,ಭಾಗ್ಯಮ್ಮ, ಮಂಜುಶೆಟ್ಟಿ, ಲಕ್ಷ್ಮಿ, ,ಮಹಾಲಕ್ಷ್ಮಿ, ಕುಮಾರಿ ಸೇರಿದಂತೆ ನೂತನ ಉಪಾದ್ಯಕ್ಷರಿಗೆ ಸಿಹಿ ತಿನ್ನಿಸಿ ಶುಭಕೋರಿದ್ರು..
ವರದಿ : ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ
Tags
ರಾಜಕೀಯ