ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಗೆ ಪದಾಧಿಕಾರಿಗಳ ಆಯ್ಕೆ
ಗಂಗಾವತಿ: ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ಬಳ್ಳಾರಿ ಜಿಲ್ಲಾಧ್ಯಕ್ಷ ನೀಲಪ್ಪ ಹಾಗೂ ಕಂಪ್ಲಿ ತಾಲೂಕು ಅಧ್ಯಕ್ಷ ಧನಂಜಯ ಅವರ ನೇತೃತ್ವದಲ್ಲಿ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಗ್ರಾಮ ಘಟಕದ ಮಹಿಳಾ ಸಂಘಟನೆಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ಘಟಕದ ಗೌರವಾಧ್ಯಕ್ಷರಾಗಿ ಹುಲಿಗೇಮ್ಮ, ಕೆಂಚಮ್ಮ, ಅಧ್ಯಕ್ಷರಾಗಿ ಮಲ್ಲಮ್ಮ, ಉಪಾಧ್ಯಕ್ಷರಾಗಿ ಹನುಮಮ್ಮ, ಖಜಾಂಚಿಗಳಾಗಿ ಯಮುನಮ್ಮ ಹಾಗೂ ಶಿವಮ್ಮ, ಪ್ರಧಾನ ಕಾರ್ಯದರ್ಶಿಯಾಗಿ ಶಾಂತಿ ಅವರನ್ನು ಆಯ್ಕೆ ಮಾಡಲಾಯಿತು.
ಸಂಘಟನಾ ಕಾರ್ಯದರ್ಶಿಗಳಾಗಿ ಕೆಂಚಮ್ಮ, ಭೀಮಮ್ಮ, ಹನುಮಂತಿ, ಅಂಕಾಲಮ್ಮ ಹಾಗೂ ಹುಲಿಗೆಮ್ಮ ಅವರನ್ನು ನೇಮಕ ಮಾಡಲಾಯಿತು.
ಸದಸ್ಯರಾಗಿ ಹನುಮಮ್ಮ, ಈರಮ್ಮ, ರೇಖಾ, ಹನುಮಂತಿ, ಗಂಗಮ್ಮ, ನೀಲಮ್ಮ, ದೇವಮ್ಮ, ತಿಮ್ಮಮ್ಮ, ಗೌರಮ್ಮ ಸೇರಿದಂತೆ ಅನೇಕ ಮಹಿಳೆಯರನ್ನು ಆಯ್ಕೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ನೀಲಪ್ಪ, “ನಮ್ಮ ಸಮುದಾಯದ ಮಹಿಳೆಯರಿಗೆ ಸರ್ಕಾರದಿಂದ ದೊರೆಯುವ ವಿವಿಧ ಯೋಜನೆಗಳ ಬಗ್ಗೆ ಸಮರ್ಪಕ ಜಾಗೃತಿ ಮೂಡಿಸುವುದು ಅತ್ಯಗತ್ಯ. ಮಹಿಳೆಯರ ಹಕ್ಕು ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ಈ ಸಂಘಟನೆ ಮಹತ್ವದ ಪಾತ್ರ ವಹಿಸಲಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
