ಕಂಪ್ಲಿ: ಸಮೀಪದ ಹೊಸ ದರೋಜಿ ಗ್ರಾಮದ
ಪ್ರೌಢಶಾಲಾ ಸರ್ಕಾರಿ ಆವರಣದಲ್ಲಿ
ಜಿಲ್ಲಾಡಳಿತದಿಂದ ಸೋಮವಾರ ಆಯೋಜಿಸಿದ್ದ
ಕಾರ್ಯಕ್ರಮದಲ್ಲಿ ನೂತನ ಕಂದಾಯ ಗ್ರಾಮಗಳ
ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.
ನಂತರ ಜಿಲ್ಲಾ ಖನಿಜಾ ನಿಧಿಯ ವಿಶೇಷ
ಅಧಿಕಾರಿ ಪಿ.ಎಸ್. ಮಂಜುನಾಥ ಮಾತನಾಡಿ,
ಹಲವು ವರ್ಷಗಳಿಂದ ಸರ್ಕಾರಿ ಮತ್ತು ಖಾಸಗಿ
ಜಾಗದಲ್ಲಿ ವಾಸಿಸುತ್ತಾ ಬಂದಿದ್ದ ಅರ್ಹ
ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿದ್ದು, ಇದರ
ಸದುಪಯೋಗದೊಂದಿಗೆ ಸಮೃದ್ಧಿಯ ಜೀವನದ
ಸರ್ಕಾರದ ಮೂಲಸೌಕರ್ಯಗಳು
ಜತೆಗೆ ಸಿಗಲಿವೆ ಎಂದರು.
ಮಾತನಾಡಿ, ವಾಸಿಸುವವರೆ ನೆಲದೊಡೆಯ
ಎಂಬಂತೆ ಹಲವು ವರ್ಷಗಳಿಂದ ನಿರಂತರವಾಗಿ
ವಾಸಿಸಿಕೊಂಡು ಬಂದಂತಹ ನೂತನ ಕಂದಾಯ
ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ
ವಿತರಿಸಲಾಯಿತು. ಸುಮಾರು 30 -40
ವರ್ಷದಿಂದ ಸರ್ಕಾರಿ ಮತ್ತು ಖಾಸಗಿ ಜಾಗದ
ಮನೆಗಳಲ್ಲಿ ವಾಸಿಸುತ್ತಿರುವೆ ಹಕ್ಕುಪತ್ರ ಒದಗಿಸಲಾಯಿತು.
ಮೂಲಸೌಕರ್ಯಗಳು ಸರ್ಕಾರದ
ಫಲಾನುಭವಿಗಳಿಗೆ ಪಡೆದುಕೊಳ್ಳಲು ಅವಕಾಶ
ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಎಂಎಲ್ಸಿ ವೈ.ಎಂ. ಸತೀಶ, ಗ್ರಾಪಂ ಅಧ್ಯಕ್ಷ
ಎ.ಗಂಗಣ್ಣ, ಉಪಾಧ್ಯಕ್ಷೆ ಶಕುಂತಲಾ, ಸದಸ್ಯರು,
ಆಹಾರ ಇಲಾಖೆಯ ಸಹಾಯಕ ನಿರ್ದೇಶಕ
ವಿಶ್ವನಾಥ, ಪಿಡಿಒ ಪ್ರಭುಗೌಡ ಸೇರಿದಂತೆ
ಅಧಿಕಾರಿಗಳ ವರ್ಗ, ಮುಖಂಡರು ಹಾಗೂ
ಫಲಾನುಭವಿಗಳು ಉಪಸ್ಥಿತರಿದ್ದರು.
ವರದಿ : ಚನ್ನಕೇಶವ
Tags
ರಾಜಕೀಯ