ಕಂಪ್ಲಿ:ಮಾ.28:
ಕಂಪ್ಲಿ ಪಟ್ಟಣದ ಭಾರತಿ ಶಿಶು ವಿದ್ಯಾಲಯದ ವಿಜ್ಞಾನ ಶಿಕ್ಷಕ ಎಸ್.ಶಾಮಸುಂದರರಾವ್ ಇವರ ಸಾಹಿತ್ಯಿಕ, ಸಾಮಾಜಿಕ, ಶೈಕ್ಷಣಿಕ ಸೇವೆಯನ್ನು ಗುರುತಿಸಿ, ಹೊಸಪೇಟೆಯಲ್ಲಿ ಸಂಗೀತ ಭಾರತಿ ಸಂಸ್ಥೆಯು ರಾಜ್ಯ ಮಟ್ಟದ ಸಮಾಜ ಸೇವಾ ಭಾರ್ಗವ ಪ್ರಶಸ್ತಿಯನ್ನು ಭಾನುವಾರ ನೀಡಿ ಗೌರವಿಸಿತು. ಸಂಗೀತ ಭಾರತಿ ಅಧ್ಯಕ್ಷ ಎಚ್.ಪಿ.ಕಲ್ಲಂಭಟ್, ಪ್ರಮುಖರಾದ ಎಂ.ಕೆ.ಗುರುರಾಜ್, ಕಮಲಾಬಾಯಿ ಎಸ್.ರಾಮಚಂದ್ರರಾವ್, ಅರವಿ ಬಸವನಗೌಡ್ರು, ಷಣ್ಮುಖಪ್ಪ ಚಿತ್ರಗಾರ್, ಸುಗಂದಾ ಎಸ್.ಶಿವರಾಮಪ್ರಸಾದ್‍ರಾವ್, ಎಲಿಗಾರ್ ವೆಂಕಟರೆಡ್ಡಿ, ಸುಧೀಂದ್ರಜೋಷಿ, ಎಸ್.ವಿಜಯಲಕ್ಷ್ಮಿ, ರಂಗನಾಥ್ ಬಡಿಗೇರ್, ನಿಂಗಪ್ಪ, ಅಂಬಿಗರ ಮಂಜುನಾಥ, ಯು.ಎಂ.ವಿದ್ಯಾಶಂಕರ್, ಅಶೋಕ ಕುಕನೂರು, ರಾಜಣ್ಣ ಚಿತ್ರಗಾರ್ ಸೇರಿ ಅನೇಕರಿದ್ದರು.
ವರದಿ : ಚನ್ನಕೇಶವ
Tags
ರಾಜ್ಯ