Kampli-ಪೈಶಾಚಿಕ ಕೃತ್ಯವೆಸಗಿದ ನಾಲ್ವರು ಕಾಮಪಿಶಾಚಿಗಳಿಗೆ ಕಠಿಣ ಶಿಕ್ಷೆ -ಕಂಪ್ಲಿ ಪ್ರತಿಭಟನೆ

ಕಂಪ್ಲಿ:ಮಾ.29:ವೀರಶೈವ ಲಿಂಗಾಯತ ಸಮಾಜದ ಸಹೋದರಿ ಕುಮಾರಿ ಪಲ್ಲವಿ ಶಿವಾನಂದಳ ಮೇಲೆ ಅತ್ಯಾಚಾರವೆಸಗಿ ಪೈಶಾಚಿಕ ಕೃತ್ಯವೆಸಗಿದ ನಾಲ್ವರು ಕಾಮಪಿಶಾಚಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಬೇಡ ಜಂಗಮ ಸಮಾಜ ಹಾಗೂ ವೀರಶೈವ ಲಿಂಗಾಯತ ಸಮಾಜದವರಿಂದ ಪೇಟೆ ಬಸವೇಶ್ವರ ದೇವಸ್ಥಾನದಿಂದ ಕಾಲ್ನಡಿಗೆಯ ಮೂಲಕ ತಾಲೂಕು ದಂಡಾಧಿಕಾರಿಗಳ ಕಚೇರಿಗೆ ತಲುಪಿ ತಹಶೀಲ್ದಾರ ಗೌಸೀಯಬೇಗಂ ಅವರ ಮೂಲಕ ಸರ್ಕಾರಕ್ಕೆ  ಮನವಿ ಪತ್ರ ಸಲ್ಲಿಸಲಾಯಿತು.
ವೀರಶೈವ ಲಿಂಗಾಯತ ಸಮುದಾಯದ ಬೇಡ ಜಂಗಮ ವಿದ್ಯಾರ್ಥಿನಿ ಕುಮಾರಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ ಹತ್ಯಾಚಾರಿಗಳನ್ನು ಪತ್ತೆ ಹಚ್ಚಿ, ಕಠಿಣ ಶಿಕ್ಷೆ ವಿಧಿಸುವಂತೆ  ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. 
ಈ ಕುರಿತು ತಹಶೀಲ್ದಾರ ಗೌಸಿಯಬೇಗಂ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿರುವ ಸಂಘದ ಪದಾಧಿಕಾರಿಗಳು, ರಾಮನಗರ ಉಪ ವಿಭಾಗದ ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಠಾಣೆಯಲ್ಲಿ ದಾಖಲಾದ ದೂರಿನಂತೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಪಿ.ಯು.ಸಿ. ವಿದ್ಯಾರ್ಥಿನಿ ಕುಮಾರಿ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ. 
ಈ ಘಟನೆಯನ್ನು   ಮತ್ತು ವೀರಶೈವ ಲಿಂಗಾಯತ ಸಮಾಜ ಹಾಗೂ ಅಖಿಲ ಕರ್ನಾಟಕ ಬೇಡ ಜಂಗಮ ಸಮಾಜ ತೀವ್ರವಾಗಿ ಖಂಡಿಸುತ್ತದೆ. ಇಂತಹ ಕೃತ್ಯಗಳು ಮುಂದಿನ ದಿನಗಳಲ್ಲಿ ಯಾವುದೇ ಸಮುದಾಯದ ಹೆಣ್ಣು ಮಕ್ಕಳ ಮೇಲೆ ನಡೆಯಬಾರದು. ಆರೀತಿಯಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿ ಮಾಡಬೇಕೆಂದು ಒತ್ತಾಯಿಸಿರುವ ಮುಖಂಡರು, ಅಪರಾಧಿಗಳನ್ನು ಕೂಡಲೇ ಬಂಧಿಸಿ ಅವರಿಗೆ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸಿದರು. 
ಈ ಸಂದರ್ಭದಲ್ಲಿ ವೀರಶೈವ ಸಂಘದ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ,ಖಜಾಂಚಿ ಎಸ್.ಎಂ.ನಾಗರಾಜ್ ಕಲ್ಯಾಣ ಚೌಕಿ ಮಠದ ಚನ್ನಬಸವಸ್ವಾಮಿ ಅಖಿಲ ಕರ್ನಾಟಕ ಬೇಡಜಂಗಮ ಸಮಾಜದ ಅಧ್ಯಕ್ಷ ಎನ್.ಎಂ.ಪತ್ರಯ್ಯಸ್ವಾಮಿ,ಕಾರ್ಯದರ್ಶಿ ಟಿ.ಎಚ್.ಎಂ.ರಾಜಕುಮಾರ,ಮುಖಂಡರಾದ ಎಸ್.ಎಸ್.ಎಂ.ಚನ್ನಯ್ಯಸ್ವಾಮಿ,ಕಲ್ಗುಡಿ ವಿಶ್ವನಾಥ,ವಾಲಿಕೊಟ್ರಪ್ಪ,ಜಡೆಯ್ಯಸ್ವಾಮಿ,ವಿದ್ಯಾಶಂಕರ,ಅರವಿಅಮರೇಶಗೌಡ,ಜವುಕಿನಶಂಕರ,ಎಸ್.ಡಿ.ಬಸವರಾಜ್,ಅಳ್ಳಳ್ಳಿ ವಿರೇಶ,ಹೊನ್ನಳ್ಳಿ ಗಂಗಾಧರ,ವಾಗೀಶ,ಜಗದೀಶ,ಬಳೆ ಮಲ್ಲಿಕಾರ್ಜುನ, ಶೇಖರಪ್ಪ,ಮಹಿಳಾ ಮುಖಂಡೆಯರಾದ ಮರಿಶೆ
ಟ್ರು ವಿಜಯಲಕ್ಷ್ಮಿ,ಡಿ.ಪುಷ್ಪ,ರೂಪಾಪಾಟೀಲ್,ನೀರಜ
 ಚಂದ್ರಶೇಖರ, ಮಹಾಂತಮ್ಮ,ಪಾರ್ವತಮ್ಮ ಪದಾಧಿಕಾರಿಗಳು, ಸದಸ್ಯರು ಮತ್ತು ಸಮುದಾಯದ ಮುಖಂಡರು ಇದ್ದರು. 

ವರದಿ : ಚನ್ನಕೇಶವ
Previous Post Next Post

Contact Form

f="https://unpkg.com/video.js/dist/video-js.css" rel="stylesheet">