ಸಿಂಧನೂರು ತಾಲೂಕಿನ ತುರುವಿಹಾಳ ಪಟ್ಟಣದ ಲಕ್ಷಾಂತರ ಭಕ್ತರನ್ನು ಹೊಂದಿರುವ ಭಕ್ತಾದಿಗಳ ಆರಾಧ್ಯದೈವ ಹಾಗೂ ಪುರಾತನ ಮಠದಲ್ಲೊಂದಾದ ಶ್ರೀ ಶಂಕರಲಿಂಗೇಶ್ವರ ತಾತನವರ ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವ
ಮತ್ತು ರಥೋತ್ಸವವೂ ವಿಜ್ರಂಭಣೆಯಿಂದ ನಡೆಯಿತು.
ಯುಗಾದಿ ಹಬ್ಬದ ಬಲಿಪಾಡ್ಯಮಿಯ ಮರುದಿನ ಬೆಳಗ್ಗೆ ಮಹಾರುದ್ರಾಭಿಷೇಕ ಹಾಗೂ ವಿವಿಧ ಪೂಜೆಗಳನ್ನು ನೆರವೇರಿಸಿ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಅದ್ದೂರಿಯಾಗಿ ಶ್ರೀ ಶಂಕರಲಿಂಗೇಶ್ವರ ತಾತನವರ ಮಠದಿಂದ ಬಸವಣ್ಣನ ಕಟ್ಟೆವರೆಗೆ ರಥವು ಜರುಗಿತು.ಅಪಾರ ಭಕ್ತ ಸಮೂಹವೂ ಉತ್ತತ್ತಿ, ಬಾಳೆಹಣ್ಣು, ಕಲ್ಲು ಸಕ್ಕರೆ ಎಸೆದು ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು.
ಕೊಂಡೋತ್ಸವ : ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಮುಂದೆ ಗುರುವಾರ ಸಂಜೆ ಉಪ್ಪಾರ ಸಮಾಜದವರು ಸಂಭ್ರಮದಿಂದ ಕೊಂಡೋತ್ಸವ ಆಚರಿಸಿದರು. ನಾಯಕ ಜನಾಂಗದವರು ಬೇಟೆಯಾಡಿ ತಂದ ಬೇಟೆಯನ್ನು ಕೊಂಡೋತ್ಸವದಲ್ಲಿ ಪ್ರದರ್ಶನ ಮಾಡುವುದು. ಕುಂಬಾರ ಮನೆಯಿಂದ ಐರಾಣಿ ತರುವುದು, ಕಬ್ಬೇರರು ಊರ ಸುತ್ತ ಹಾಲೂ ಎರೆಯುವ ವಾಡಿಕೆ. ಊರಿಗೆ ಒಳಿತಾಗಲಿ ಎನ್ನುವುದೇ ಗ್ರಾಮಸ್ಥರ ಅಪಾರ ನಂಬಿಕೆಯಾಗಿದೆ ಇದು ಈ ಭಾಗದಲ್ಲಿನ ವಿಶೇಷ ಆಚರಣೆಯಾಗಿದೆ.
ವಿಶೇಷ : ರಥೋತ್ಸವದ ವೇಳೆ ಬ್ರಷ್ಟಾಚಾರ ಮುಕ್ತ ಭಾರತ ನನ್ನ ಕನಸು ಹಾಗೂ ಮತ್ತೊಮ್ಮ ಆರ್ ಬಸನಗೌಡ ತುರುವಿಹಾಳ ಶಾಸಕರಾಗಲಿ ಎಂದು ಬಾಳೆಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆದರು .
ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಊರಿನ ಹಿರಿಯರು, ಹಾಗೂ ಸಾವಿರಾರು ಭಕ್ತಾದಿಗಳು ಭಾಗಿಯಾಗಿದ್ದರು.
ರಿಪೋರ್ಟರ್ ಮೆಹಬೂಬ ಮೋಮಿನ
Tags
ಟಾಪ್ ನ್ಯೂಸ್