ರಾಜ್ಯದಲ್ಲಿ ಹೋಳಿ ಹುಣ್ಣಿಮೆ ದಿನದಂದು ಕಾಮನ್ ಸುಟ್ಟು ಸಡಗರ ಸಂಭ್ರಮದಿಂದ ಬಣ್ಣದ ಹೋಕುಳಿಯ ಆಟ ಆಡುವ ಸಂಪ್ರದಾಯ ನಗರದಲ್ಲಿ ನಡೆಯುತ್ತಿದ್ದರೆ.
ಹೈದರಾಬಾದ್ ಕರ್ನಾಟಕದ ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಮಾತ್ರ ಯುಗಾದಿ ಹಬ್ಬದ ಬೇವು ಬೆಲ್ಲ ಸವಿದು ವಿವಿಧ ಬಗೆಯ ಬಣ್ಣಗಳಿಂದ ರಂಗು ರಂಗಿನ ಬಣ್ಣದ ಆಟವಾಡುತ್ತಿದ್ದು ವಿಶೇಷವಾಗಿದೆ.
ಪ್ರತಿವರ್ಷವು ಯುಗಾದಿಯ ಅಮಾವಾಸ್ಯೆ ಪಾಡ್ಯ ಮರು ಪಾಡ್ಯ ಈ ಮೂರು ದಿನಗಳು ವಿಶೇಷತೆಯನ್ನು ಪಡೆದಿರುತ್ತವೆ ಮೊದಲು ಎರಡು ದಿನಗಳ ಕಾಲ ಬೆಳಗಿನ ಜಾವ 5:00 ಗಂಟೆಗೆ ಸುಮಾರಿಗೆ ಆ ಗ್ರಾಮದಲ್ಲಿರುವ ಪ್ರತಿಯೊಂದು ದೇವಸ್ಥಾನಗಳಿಗೆ ತುಂಬಿದ ಕೊಡದೊಂದಿಗೆ ತೆರಳಿ ನೂರಾರು ಭಕ್ತರು ದೇವರಿಗೆ ನೀರನ್ನು ಎರೆಯುತ್ತಾರೆ.
ಯುಗಾದಿ ಅಮವಾಸಿ ಎರಡನೇ ದಿವಸ ಗ್ರಾಮದ ಪ್ರಮುಖ ದೇವಸ್ಥಾನ ಒಂದರಲ್ಲಿ ದೇವು ಬೆಲ್ಲದ ಭಕ್ತಿಯ ತೀರ್ಥ ಜ್ಯೂಸನ್ನು ತಯಾರಿಸುತ್ತಾರೆ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಯುಗಾದಿಯ ಹೊಸ ವರ್ಷದ ಶುಭಾಶಯ ಕೋರುವ ಸಂಪ್ರದಾಯ ಸಂಕೇತವಾದ ಬೇವು ಬೆಲ್ಲದಿಂದ ತಯಾರಿಸಿದ ಜ್ಯೂಸ್ ನೀಡಿ ಮಧ್ಯಾಹ್ನ 1:00ಗೆ ಅನ್ನದಾನದ ವ್ಯವಸ್ಥೆ ಮಾಡಿರುತ್ತಾರೆ ದೇವಸ್ಥಾನಕ್ಕೆ ತೆರಳಿದ ಅನೇಕ ಭಕ್ತಾದಿಗಳು ಪ್ರಸಾದವನ್ನು ಸ್ವೀಕರಿಸಿ ದೇವರಿಗೆ ಭಕ್ತಿಯ ನಮನಗಳನ್ನು ಸಲ್ಲಿಸುತ್ತಾರೆ.
ಯುಗಾದಿ ಅಮಾವಾಸಿಯ ಮೂರನೇ ದಿವಸ ಹಿರಿಯರು ಕೆಲವು ಯುವಕರು ಮಹಿಳೆಯರು ವಿದ್ಯಾರ್ಥಿಗಳು ಪುಟ್ಟು ಮಕ್ಕಳು ತಮ್ಮ ಮನೆಯಲ್ಲಿ ತಯಾರಿಸಿದ ವಿವಿಧ ಬಣ್ಣಗಳನ್ನು ತೆಗೆದುಕೊಂಡು ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಂಚರಿಸುತ್ತ ಸರ್ವಾಂಗಣಿಯರಿಗೆ ಬಣ್ಣವನ್ನು ಎರೆಚುತ್ತ ಪ್ರೀತಿಯ ಬಾಂಧವ್ಯದ ಭಾವೈಕ್ಯತೆ ಮೆರೆಯುತ್ತಾರೆ ಗ್ರಾಮೀಣ ಪ್ರದೇಶದಲ್ಲಿ ಯುಗಾದಿ ಹಬ್ಬವೆಂದರೆ ಇದೊಂದು ಹೊಸ ವರ್ಷದ ಸಂಕೇತವಾಗಿದೆ ಪರಸ್ವರ ಬಣ್ಣವನ್ನು ಎರಚಿ ಹಬ್ಬವನ್ನು ಆಚರಣೆ ಮಾಡುತ್ತಿರುವುದು ಇದಕ್ಕಿಂತ ಸಂತೋಷ ಬೇರೆಲ್ಲಿ ಸಿಗಲಾರದೆ ಎಂದು ಕೆಲವು ಯುವಕರು ಸಂಭ್ರಮದ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾರೆ.
ನಂತರ ಮೂ ಸಂಪ್ರದಾಯದಂತೆ ಸರ್ವ ಸಮಾಜದವರ ಬಾವೈಕ್ಯತೆ ಮೆರೆದು ವಿವಿಧ ಬಗೆಯ ಕಣ್ಣುಗಳಿಗೆ ಕಂಗೊಳಿಸುತ್ತಿರುವ ಬಣ್ಣಗಳನ್ನು ತಯಾರಿಸಿ ರಂಗುರಂಗಿನ ಆ ದಿನ ಸಂಜೆ ವರೆಗೂ ಬಣ್ಣದ ಓಕುಳಿ ಆಡುತ್ತಿರುವುದು ವಿಶೇಷವೆನಿಸುತ್ತದೆ
ವರದಿ : ಮಲ್ಲಿಕಾರ್ಜುನ್ ದೋಟಿಹಾಳ, ಕುಷ್ಟಗಿ
Tags
ರಾಜ್ಯ