ಇಂಡಿ :
ಭಾರತೀಯ ಜನತಾ ಪಾರ್ಟಿ ವಿಜಯಪೂರ ಜಿಲ್ಲಾ ಎಸ್ ಟಿ ಮೊರ್ಚಾ ಸಮಾವೇಶ ಇಂದು ಸಂಜೆ ಇಂಡಿ ನಗರದಲ್ಲಿ ಹಮ್ಮಿಕೊಳ್ಳಲಾಯಿತು,ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೈಸೂರು -ಕೊಡಗು ಸಂಸದರಾದ ಶ್ರೀ ಪ್ರತಾಪಸಿಂಹ ಅವರು ನಮ್ಮ ಸರ್ಕಾರ ತಳವಾರ ಹಾಗೂ ಪರಿವಾರ ಸಮುದಾಯಕ್ಕೆ ಮಾತು ಕೊಟ್ಟಂತೆ ಎಸ್ ಟಿ ಮೀಸಲಾತಿ ಕೊಟ್ಟಿದೆ, ನಮ್ಮ ಸರ್ಕಾರ ವಿಜಯಪೂರ ಜಿಲ್ಲೆಯ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಸುಮಾರು ಮೂರು ಸಾವಿರ ಕೋಟಿ ರೂಪಾಯಿಗಳಷ್ಟು ಅನುದಾನ ನೀಡಿದೆ.
ಇದರಿಂದ ಇಂಡಿ,ಚಡಚಣ,ವಿಜಯಪೂರ ತಾಲ್ಲೂಕಿನ ಭಾಗಕ್ಕೆ ನೀರಾವರಿಯಿಂದ ಅನುಕೂಲವಾಗಲಿದೆ ಎಂದು ಹೇಳಿದರು,ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದರು.
ಈ ಸಂದರ್ಭದಲ್ಲಿ ತಳವಾರ ಸಮಾಜದ ವತಿಯಿಂದ ಪ್ರತಾಪಸಿಂಹವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸಿಂದಗಿ ಮತಕ್ಷೇತ್ರದ ಶಾಸಕರಾದ ರಮೇಶ ಬೊಸನೂರ, ಮಾಜಿ ಸಚಿವರಾದ ಎಸ್ ಕೆ ಬೆಳ್ಳುಬ್ಬಿ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಆರ್ ಎಸ್ ಪಾಟೀಲ (ಕುಚಬಾಳ), ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಚಂದ್ರಶೇಖರ ಕವಟಿಗಿ, ದಯಾಸಾಗರ ಪಾಟೀಲ, ಶಂಕರಗೌಡ ಪಾಟೀಲ, ವಿರಾಜ ಪಾಟೀಲ, ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ಮಲ್ಲಿಕಾರ್ಜುನ ಜೋಗುರ, ಶ್ರೀಶೈಲಗೌಡ ಬಿರಾದಾರ, ಅನೀಲ ಜಮಾದಾರ, ರವಿ ವಗ್ಗೆ, ಯಲ್ಲಪ್ಪ ಹದರಿ, ಇಂಡಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಿವಡೆ, ರಾಜು ಯರಗಲ್ಲ, ಬಸವರಾಜ ಬಿರಾದಾರ, ಮಂಜುನಾಥ ಓಲೆಕಾರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಸಚೀನ ಇಂಡಿ
Tags
ರಾಜಕೀಯ