ಹುಬ್ಬಳ್ಳಿ:
ಶುಕ್ರವಾರ 7 ಏಪ್ರಿಲ್ 2023 ರಂದು ಹುಬ್ಬಳ್ಳಿಯ ವಿದ್ಯಾನಗರದ ಮರಾಠಾ ಭವನದಲ್ಲಿ ಮರಾಠಾ ಕ್ರಾಂತಿ ಮೋರ್ಚಾದ ರಾಜ್ಯ ಮಟ್ಟದ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಎಲ್ಲ ಜಿಲ್ಲೆಯ ಪ್ರಮುಖ ಮುಖಂಡರು ಭಾಗವಹಿಸಿದರು .ಇತ್ತೀಚಿಗೆ ರಾಜ್ಯ ಸರ್ಕಾರ ಮೀಸಲಾತಿ ಕುರಿತು ಕೈಗೊಂಡಿರುವ ನಿರ್ಣಯದಲ್ಲಿ ಮರಾಠಾ ಸಮಾಜಕ್ಕೆ ಮೀಸಲಾತಿಯಲ್ಲಿ ಆಗಿರುವ ಅನ್ಯಾಯದ ಕುರಿತು ಕೈಕೊಳ್ಳಬೇಕಾದ ಕ್ರಮದ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.
ಆದರೆ ಕರ್ನಾಟಕದ ಮೂರೂ ಪ್ರಮುಖ ರಾಜಕೀಯ ಪಕ್ಷಗಳಾದ ಜೆ.ಡಿ.ಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಸಾಕಷ್ಟು ಸಲ ರಾಜ್ಯಾದ್ಯಂತ ಮನವಿ ಸಲ್ಲಿಸಿದ್ದೇವೆ ಮರಾಠಾ ಸಮಾಜದ ಬೇಡಿಕೆಯನ್ನು ಪರಿಗಣಿಸಲಿಲ್ಲ.
ಬಿಜೆಪಿ ಸರ್ಕಾರದ ಇಬ್ಬರೂ ಮುಖ್ಯ ಮಂತ್ರಿಗಳು ಹಿಂದೂ ಸಮಾಜಕ್ಕೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆಗಳನ್ನು ಕೊಂಡಾಡಿ ತಮ್ಮದು ನ್ಯಾಯಯುತ ಬೇಡಿಕೆ ಇದ್ದು ಪ್ರ ವರ್ಗ 2A ಮೀಸಲಾತಿಯನ್ನು ಕೊಡುತ್ತೇವೆ ಎಂದು ಆಶ್ವಾಸನೆಯನ್ನೂ ಸಹ ನೀಡಿದ್ದರು. (ಅಂದಿನ ಮುಖ್ಯಮಂತ್ರಿ ಮಾನ್ಯ ಶ್ರೀ BS ಯಡಿಯೂರಪ್ಪನವರು ಸರ್ಕಾರ ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಮಾಡುವ ಆಶ್ವಾಸನೆ ನೀಡಿದರು ಆಶ್ವಾಸನೆಯಾಗಿ ಉಳಿಯಿತು) ಆದರೆ ಅಧಿಕಾರಾವಧಿಯ ಕೊನೆಗಳಿಗೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸು ಕಡೆಗಣಿಸಿ ಇತರ ದೊಡ್ಡ ದೊಡ್ಡ ಮುಂದುವರೆದ ಸಮಾಜಗಳ ಜೊತೆಯಲ್ಲಿ ತೀರಾ ಹಿಂದುಳಿದಂಥ ಮರಾಠಾ ಸಮಾಜವನ್ನು ಗ್ರೂಪ್ 2-ಡಿ ನಲ್ಲಿ ಸೇರ್ಪಡೆ ಮಾಡಿ ಸಮಾಜಕ್ಕೆ ಬಹುದೊಡ್ಡ ಅನ್ಯಾಯ ಮಾಡಿದ್ದಾರೆ. ಇದರಿಂದಾಗಿ ಕರ್ನಾಟಕದಲ್ಲಿ ಮರಾಠಾ ಸಮಾಜಕ್ಕೆ ಅನ್ಯಾಯ ಮಾಡಿದಂತಾಗಿದೆ.
ಈ ಕುರಿತು ಇಂದಿನ ಸಭೆಯಲ್ಲಿ ಕೂಲಂಕುಶವಾಗಿ ಚರ್ಚಿಸಿ ಎಲ್ಲ ರಾಜಕೀಯ ಪಕ್ಷಗಳು ಮರಾಠಾ ಸಮಾಜಕ್ಕೆ ಅನ್ಯಾಯ ಮಾಡಿರೋದುನ್ನ ವಿರೋಧಿಸಿ ಮುಂಬರುವ ವಿಧಾನಸಭಾ ಚುನಾವಣೆಯನ್ನೂ ಬಹಿಷ್ಕರಿಸುವುದಕ್ಕಾಗಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಹಾಗೂ ಮರಾಠಾ ಸಮಾಜಕ್ಕೆ ನ್ಯಾಯಯುತವಾಗಿ ದೊರಕಬೇಕಾದ ಮೀಸಲಾತಿಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಎಲ್ಲ ರೀತಿಯ ಹೋರಾಟ ಹಾಗೂ ಕಾನೂನು ಹೋರಾಟ ಸಹ ಮಾಡುವುದಕ್ಕೆ ನಿರ್ಣಯಿಸಲಾಯಿತು.
ಇಂದಿನ ಸಭೆಯಲ್ಲಿ, ಕರ್ನಾಟಕ ಮರಾಠಾ ಕ್ರಾಂತಿ ಮೋರ್ಚಾದ ಗೌರವ ಅದ್ಯಕ್ಷರಾದ ಶಿವಾಜಿ ರಾವ್ ಪಾಟೀಲ್ ಗುರೂಜಿ ಅಧ್ಯಕ್ಷರಾದ ನಾರಾಯಣ್ ಗಣೇಶ್, ಬೀದರ, ಕಾರ್ಯದರ್ಶಿ ರಮೇಶ, ಮಿಸಾಳೆ, ನ್ಯಾಯವಾದಿಗಳು ಬೆಳಗಾಂವಿ, ಖಜಾಂಚಿ ಪ್ರಕಾಶ ಮುಂಜೋಜಿ ಹಾವೇರಿ, ವಿ ಪದಾಧಿಕಾರಿಗಳಾದ ಲಕ್ಷ್ಮೀಕಾಂತರಾವ್, ಬೆಂಗಳೂರು, ಸುನಿಲ್ ದಳವಿ ಅಧ್ಯಕ್ಷರು ಮರಾಠಾ ಸಮಾಜ ಹುಬ್ಬಳ್ಳಿ, ನಾರಾಯಣ ವೈದ್ಯ ಕಾರ್ಯದರ್ಶಿ ಮರಾಠಾ ಸಮಾಜ ಹುಬ್ಬಳ್ಳಿ, ಎಸ್ ಕಾಳೆ ವಕೀಲರು ಕುಂದಗೋಳ, ಮಹದೇವರಾವ ಚೌಹಾಣ್ ಬೆಳಗಾಂ, ಕೆ.ಎಸ್.ಜಾಧವ ಕೊಪ್ಪಳ, ವಿಠಲ ವಾಘಮೋಡೆ ನಿಪ್ಪಾಣಿ, ಭೀಮಪ್ಪ ಕಸಾಯಿ, ಮಹೇಂದ್ರ ಚವ್ಹಾಣ, ಬಸವಂತ್ ಶಿಂದೆ, ವಿನೋದ ಪಡ್ತಾರೆ, ಸುರೇಶ ಬೇಂದ್ರೆ, ಜ್ಞಾನೇಶ್ವರ ಗಾವಡೆ ಮುಂತಾದವರು ಭಾಗವಹಿಸಿದ್ದರು.
ವರದಿ : ಬಸವರಾಜ ಕಬಡ್ಡಿ
Tags
ಟಾಪ್ ನ್ಯೂಸ್