Koppal : ವೈದ್ಯಕೀಯ ವಿಭಾಗದ ಉಪಾಧ್ಯಕ್ಷರಾಗಿ ಡಾ.ಮಹೇಶ್ ಗೋವಿನಕೊಪ್ ನೇಮಕ


ವೈದ್ಯಕೀಯ ವಿಭಾಗದ ಉಪಾಧ್ಯಕ್ಷರಾಗಿ ಡಾ.ಮಹೇಶ್ ಗೋವಿನಕೊಪ್ ನೇಮಕ

ಕೊಪ್ಪಳ,: ನಗರದ ವೈದ್ಯ ಡಾ.ಮಹೇಶ್.  ಆರ್. ಗೋವಿನಕೊಪ್ ಅವರನ್ನು ಜೆಡಿಎಸ್ ಪಕ್ಷದ ವೈದ್ಯಕೀಯ ವಿಭಾಗದ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಕೂಡಲೇ ಜಾರಿಗೆ ಬರುವಂತೆ ವೈದ್ಯಕೀಯ ವಿಭಾಗದ ರಾಜ್ಯಾಧ್ಯಕ್ಷ ಡಾ.ಟಿ ಆಂಜನಪ್ಪ ಆದೇಶಿಸಿದ್ದಾರೆ.

ಕೊಪ್ಪಳ ಜೆಡಿಎಸ್ ಜಿಲ್ಲಾಧ್ಯಕ್ಷ ವೀರೇಶ್ ಮಹಾಂತಯ್ಯನಮಠ ಆವರ ಶಿಫಾರಸ್ಸಿನ ಮೇರೆಗೆ ಡಾ.ಮಹೇಶ್ ಆರ್. ಗೋವನಕೊಪ್ ಅವರನ್ನು ಜೆಡಿಎಸ್ ಪಕ್ಷದ ವೈದ್ಯಕೀಯ ವಿಭಾಗದ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ತಕ್ಷಣವೇ ಜವಾವ್ದಾರಿಯನ್ನು ವಹಿಸಿಕೊಂಡು, ಪಕ್ಷದ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ರಾಜ್ಯದಲ್ಲಿ ಜನತಾದಳ (ಜಾತ್ಯಾತೀತ) ಪಕ್ಷದ ವೈದ್ಯಕೀಯ ವಿಭಾಗವನ್ನು ಪರಿಣಾಮಕಾರಿಯಾಗಿ ಸಂಘಟಿಸಿ, ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರಬೇಕು ಎಂದು ವೈದ್ಯಕೀಯ ವಿಭಾಗದ ರಾಜ್ಯಾಧ್ಯಕ್ಷ ಡಾ.ಟಿ ಆಂಜನಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ : ಶಿವಕುಮಾರ ಹಿರೇಮಠ

Previous Post Next Post

Contact Form

f="https://unpkg.com/video.js/dist/video-js.css" rel="stylesheet">