Sindhanuru:ಹುಲ್ಲಿನ ಗಾಡಿ ತಗುಲಿ ಮುರಿದ ಗಿಡಕ್ಕೆ ವನಸಿರಿ ತಂಡ ರಕ್ಷಣೆ

ಹುಲ್ಲಿನ ಗಾಡಿ ತಗುಲಿ ಮುರಿದ ಗಿಡಕ್ಕೆ ವನಸಿರಿ ತಂಡ ರಕ್ಷಣೆ

ಸಿಂಧನೂರು ತಾಲೂಕಿನ ಮಲ್ಲಾಪೂರ ಗ್ರಾಮದ ರಸ್ತೆಬದಿಯ ನೆಟ್ಟಿರುವ ಸಸಿಗಳಿಗೆ ಇಂದು ರಸ್ತೆಯಲ್ಲಿ ಹುಲ್ಲಿನ ಟ್ರ್ಯಾಕ್ಟರ್ ತಗುಲಿ ಬೇವಿನ ಗಿಡ ಬಗ್ಗಿ ಮುರಿದು ಬಿದ್ದಿತ್ತು.ಇದನ್ನು ಕಂಡ ವನಸಿರಿ ಫೌಂಡೇಶನ್ ತಂಡ ಅದಕ್ಕೆ ಮರುಜೀವ ನೀಡಲು ಮರುಜೋಡಣೆ ಮಾಡುವ ಪ್ರಯತ್ನ ಮಾಡಿ ನೀರು ಹಾಕಿ,ಸಗಣಿ ಹಾಕಿ,ತಟ್ಟಿನ ಚೀಲ ಕಟ್ಟಿ ರಕ್ಷಣೆ ಮಾಡಿ ಗಿಡಮರಗಳ ಮೇಲಿನ ಪರಿಸರ ಪ್ರೇಮ ಮೆರೆದರು.ಇದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ, ಮಲ್ಲಾಪೂರ ಗ್ರಾಮದ ಶಿವು, ವನಸಿರಿ ಫೌಂಡೇಶನ್ ದತ್ತು ಪುತ್ರರಾದ ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಮಂಜು ತಲೆಖಾನ್  ಉಪಸ್ಥಿತರಿದ್ದರು.

ವರದಿ : ಡಿ ಅಲಂಭಾಷಾ
Previous Post Next Post

Contact Form

f="https://unpkg.com/video.js/dist/video-js.css" rel="stylesheet">