Siruguppa : ಕಾಂಗ್ರೆಸ್ ಅಭ್ಯರ್ಥಿಯಾದ ಬಿ ಎಂ ನಾಗರಾಜ ಅವರ ಪರ ಸಿದ್ದು ಪ್ರಚಾರ

 ಸಿರುಗುಪ್ಪ ತಾಲೂಕು ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾದ ಬಿ ಎಂ ನಾಗರಾಜ ಅವರ ಪರ ಮತಯಾಚನೆಗೆ ಹೈಸ್ಕೂಲ್ ಮೈದಾನ ದಲ್ಲಿ,ಬೃಹತ್ ವೇದಿಕೆ ಯಲ್ಲಿ ಕಾಂಗ್ರೆಸ್ ಪಕ್ಷದ ಪರ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಆಗಮಿಸಿದ್ದರು ತಾಲೂಕಿನ ಅಪಾರವಾದ ಕಾರ್ಯಕರ್ತರು ಮುಖಂಡರುಗಳು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು, ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿಗಳಾದ ಶ್ರೀಯುತ ಸಿದ್ದರಾಮಯ್ಯ  ನವರು ವಿರೋಧ ಪಕ್ಷ ಬಿಜೆಪಿಯ ಸುಳ್ಳು ಭರವಸೆಗಳ ಕಾರ್ಯ ವೈಖರಿಯಗಳ ಬಗ್ಗೆ ಟೀಕಿಸಿದರು, ಅದೇ ರೀತಿ ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಗ್ಯಾರಂಟಿ ಕಾರ್ಡಿನ ಜೊತೆಗೆ 4 ಪ್ರಣಾಳಿಕೆಗಳ ಬಗ್ಗೆ ವಿಸ್ತರಿಸಿದರು,ಗೃಹಿಣಿಗೆ 2,000 ವಸತಿಧನ  ಪ್ರತಿಯೊಬ್ಬ ಮನೆಗೆ 200 ಯುನಿಟ್ ಗಳವರಿಗೆ  ವಿದ್ಯುತ್  ಉಚಿತ ಮೂರನೇದಾಗಿ, ಬಿಪಿಎಲ್ ಕಾರ್ಡ್ ಇರುವವರಿಗೆ10 ಕೆಜಿ  ಅಕ್ಕಿ ಉಚಿತ ನಾಲ್ಕನೆಯ ಗ್ಯಾರಂಟಿ ಕಾರ್ಡ್ ನಿರುದ್ಯೋಗಿ ಯುವಕರಿಗೆ 1500 ರಿಂದ 2000 ವರೆಗೆ ಸಹಾಯಧನ, ಇದನ್ನೆಲ್ಲಾ  ಬಿಜೆಪಿ ಸರ್ಕಾರದವರು ಏರಿಸಿದ ಬೆಲೆ ಏರಿಕೆ ಪರ್ಯಾಯವಾಗಿ ನಿರುದ್ಯೋಗ ಸುಳ್ಳು ಆಶ್ವಾಸನೆ ಗಳಿಗೆ ಪರಿಹಾರ ವಾಗಿ ಈ ಬಾರಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಈ ನಾಲ್ಕು ಗ್ಯಾರಂಟಿ ಕಾರ್ಡ್ ಯೋಜನೆಗಳು ಚಾಲ್ತಿಯಲ್ಲಿ ತರುತ್ತೇವೆ ಎಂದು ಪ್ರಣಾಳಿಕೆಯನ್ನು ಘೋಷಣೆ ಮಾಡಿದರು ಕಾಂಗ್ರೆಸ್ ಪಕ್ಷ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ತಿಳಿಸಿದರು.

 ಅದೇ ರೀತಿ ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಈ ಬಾರಿ ಸಿರುಗುಪ್ಪ ತಾಲೂಕು ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಅಷ್ಟೇ ಸತ್ಯ ಎಂದರು, ಮತ್ತು 50,000 ಬಹುಮತ ಗಳಿಂದ ಜಯಭೇರಿ ಬಾರಿಸಲಿದ್ದಾರೆ ಬಿ ಎಂ ನಾಗರಾಜ ನವರು ಎಂದು ತಿಳಿಸಿದರು.

ವರದಿ : ಡಿ ಅಲಂಭಾಷಾ

Previous Post Next Post

Contact Form

f="https://unpkg.com/video.js/dist/video-js.css" rel="stylesheet">