Turvihal : ಸೌಮ್ಯ ಸ್ವಭಾವದ ಪ್ರತಾಪ ಗೌಡರನ್ನು ಕ್ಷೇತ್ರದ ಮತದಾರರುಕೈ ಹಿಯುತ್ತಾರೇ ಕೆ.ವಿರುಪಾಕ್ಷಪ್ಪ


ಸೌಮ್ಯ ಸ್ವಭಾವದ ಪ್ರತಾಪ ಗೌಡರನ್ನು ಕ್ಷೇತ್ರದ ಮತದಾರರುಕೈ ಹಿಯುತ್ತಾರೇ ಕೆ.ವಿರುಪಾಕ್ಷಪ್ಪ

ತುರವಿಹಾಳ: ಪಟ್ಟಣದಲ್ಲಿ ಭಾನುವಾರ ಕೆಪೇಕ್ ನಿಗಮದ ಅಧ್ಯಕ್ಷರಾದ ಕೆ ವಿರೂಪಾಕ್ಷಪ್ಪ ಮಾಜಿ ಸಂಸದ ಕಳೆದ ಚುನಾವಣೆಯಲ್ಲಿ ಮಾಜಿ ಶಾಸಕರ ಸೋಲು ಆಕಸ್ಮಿಕವಾದದ್ದು.ಈ ಬಾರಿ ಮಸ್ಕಿ ಕ್ಷೇತ್ರದ ಮತದಾರರು ಬಿಜೆಪಿ ಅಭ್ಯರ್ಥಿ ಸೋಮ್ಯಸ್ವಭಾವದ
ಪ್ರತಾಪ ಗೌಡರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಲು ತಿರ್ಮಾನಿಸಿದ್ದಾರೆ, ಪಕ್ಷದಕಾರ್ಯಕರ್ತರು ಯಾವುದೆ ಆಮೀಶಗೊಳ ಗಾಗದೆ ನಿರ್ಭೀತಿಯಿಂದ ರಾಜ್ಯ ಸರ್ಕಾರದ ಜನಪರ ಅಭಿವೃದ್ಧಿ ಯೋಜನೆಗಳ ಬಗ್ಗೆ ಹಾಗೂ ಪ್ರತಾಪಗೌಡ ಪಾಟೀಲರ ಕ್ಷೇತ್ರದ ಪ್ರಗತಿ ಬಗ್ಗೆ ನಿರ್ವಹಿಸಿರುವ ಕಾರ್ಯಗಳು ಈ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೇರಿಸಲಿವೆ ಎಂದರು,
ಈ ಬಾರಿಯ ಚುನಾವಣೆ ಕ್ಷೇತ್ರದ ಜನತೆ ಸ್ವಾಭಿಮಾನ ಪ್ರತಿಕ ವಾಗಿದೆ ಎಂದು ಹೇಳಿದರು ಅವರು ತುರವಿಹಾಳ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿರುವ ಕರಕಪ್ಪ ಸಾಹುಕಾರ ಅವರ ನೂತನ ಕಟ್ಟಡದಲ್ಲಿ ಬಿಜೆಪಿ ಕಾರ್ಯಾಲಯ ಉದ್ಘಾಟನೆ ಮತ್ತು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನೂತನ ಬಿಜೆಪಿ ಕಾರ್ಯಾಲಯ ಉದ್ಘಾಟನೆಗೆ ಆಗಮಿಸಿದ ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿಗಳು ಉತ್ತರ ಪ್ರದೇಶದ ಮಾಜಿ ಸಚಿವರಾದ ಡಾ ಸತೀಶ್ಚಂದ್ರ ದ್ವಿವೇದಿ ಪ್ರತಾಪ್‌ ಗೌಡ ಪಾಟೀಲ್ ಮತ್ತು ಮಾಜಿ ಸಂಸದರಾದ ಕೆ ವಿರೂಪಾಕ್ಷಪ್ಪ ರವರನ್ನು  ಕಾರ್ಯಕ್ರಮದಲ್ಲಿ ಪಟಾಕಿ ಸಿಡಿಸಿ ಸಂಭ್ರಮ ದಿಂದ ಸ್ವಾಗತಿಸಿದರು.

ನಂತರ ತುರವಿಹಾಳ ಪಟ್ಟಣದ ಮಹಾಶಕ್ತಿ ಕೇಂದ್ರದ ನೂತನ ಕಾರ್ಯಾಲಯ ಉದ್ಘಾಟಿಸಿ ಕಾಂಗ್ರೆಸ್ ಪಕ್ಷದ ದುರಾಡಳಿತಕ್ಕೆ ಬೇಸತ್ತು ಬಂದ ಕಲಮಂಗಿ ಮತ್ತು ತುರುವಿಹಾಳ ಪಟ್ಟಣದ ನೂರಾರು ಕಾಂಗ್ರೆಸ್ ಕಾರ್ಯಕರ್ತರನ್ನು  ಬಿಜೆಪಿ ಪಕ್ಷಕ್ಕೆ ವಿರೂಪಾಕ್ಷಪ್ಪ ಪ್ರತಾಪ್ ಗೌಡ ಪಾಟೀಲ್‌ ಶಾಲು ಹಾಕುವ ಮೂಲಕ ಬರಮಾಡಿಕೊಂಡರು. 
ಈ ಸಂದರ್ಭದಲ್ಲಿ ಬಸವರಾಜಪ್ಪ ಬಳಗನೂರು,
ಬಸವಂತರಾಯಕುರಿ, ಅಮರೇಶ್ ಗಚ್ಚಿನಮನಿ,
ಶರಣಬಸವ ವಕೀಲರು, ಕರಕಪ್ಪಸಾಹುಕಾರ್,
ತಿರುಪತೇಪ್ಪ ನಾಯಕ್, ನಿಂಗಪ್ಪ ಕಟ್ಟಿಮನಿ,
ರುದ್ರಸ್ವಾಮಿ ಕೆಂಡದಮಠ, ಕರಿಯಪ್ಪ ಭ೦ಗಿ,
ರಾಯನಗೌಡ ಕಂಪರೆಡ್ಡಿ, ಸಿದ್ದೇಶ್ವರ ಗುರಿಕಾರ,
ದುರ್ಗೇಶ್ ವಕೀಲರು, ಶಿವರಾಜ್‌ ಪಾಟೀಲ್‌,
ಚನ್ನಬಸವ ದೇಸಾಯಿ, ಮಾರುತಿ ಹಡಗಿನಾಳ,
ನಾಗರಾಜ್ ಆನೆಗುಂದಿ,
ಚನ್ನು ಪಾಲ್ತಿ, ಮತ್ತು ನೂರಾರು ಬಿಜೆಪಿ ಕಾರ್ಯಕರ್ತರು ಇದ್ದರು.

ವರದಿ : ಮೆಹಬೂಬ್ ಮೊಮಿನ್
Previous Post Next Post

Contact Form

f="https://unpkg.com/video.js/dist/video-js.css" rel="stylesheet">