ಟಿಕೆಟ್ ಜಿದ್ದಾ ಜಿದ್ದಿ : ಜೋರಾಯ್ತು ಹಾಲಪ್ಪ ಆಚಾರ್ - ನವೀನ್ ಕುಮಾರ್ ಫ್ಯಾನ್ಸ್ ಅಬ್ಬರ-Yalaburga


ಟಿಕೆಟ್ ಜಿದ್ದಾ ಜಿದ್ದಿ : ಜೋರಾಯ್ತು ಹಾಲಪ್ಪ  ಆಚಾರ್ - ನವೀನ್ ಕುಮಾರ್ ಫ್ಯಾನ್ಸ್ ಅಬ್ಬರ

ಯಲಬುರ್ಗಾ : ಯಲಬುರ್ಗಾ ವಿಧಾನಸಭಾ ಬಿಜೆಪಿ ಟಿಕೆಟ್ ಗೆ ಸಂಬಂಧಿಸಿದಂತೆ ಸಚಿವ ಹಾಲಪ್ಪ ಆಚಾರ್ ಫ್ಯಾನ್ಸ್ ಮತ್ತು ಮಾಜಿ ಶಾಸಕರ ಪುತ್ರ ನವೀನ್ ಗುಳಗಣ್ಣನವರ್ ಫ್ಯಾನ್ಸ್  ಮದ್ಯೆ ಸೋಶಿಯಲ್ ಮೀಡಿಯಾ ಅಬ್ಬರ ಜೋರಾಗಿದೆ.


ಬಿಜೆಪಿ ಟಿಕೆಟ್ ಘೋಷಣೆಗೆ ಕೌಂಟ್ ಡೌನ್ ಶುರುವಾಗಿದೆ. ಈ ಮದ್ಯೆ ಕಳೆದ ಮೂರ್ನಾಲ್ಕು ದಿನದಿಂದಲೂ ಹಾಲಿ ಶಾಸಕ ಹಾಲಪ್ಪ ಆಚಾರ್ ಮತ್ತು ಮಾಜಿ ಶಾಸಕರ ಪುತ್ರ ನವೀನ್ ಅವರ ಅಭಿಮಾನಿಗಳು ಫೇಸಬುಕ್, ವಾಟ್ಸಪ್, ಇನ್ಸ್ಟಾಗ್ರಾಮ್ ಗಳಲ್ಲಿ ಪರಸ್ಪರ ಪೋಸ್ಟ್ ಹಾಕುವ ಮೂಲಕ ಅಭಿಮಾನ ಮೆರೆದಿದ್ದಾರೆ.

Read Also : BJP :ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ Count Down ಶುರು..!!

ಸದ್ಯ ಯಲಬುರ್ಗಾ ಬಿಜೆಪಿ ಟಿಕೆಟ್ ಗೆ ಹಾಲಿ ಶಾಸಕರು, ಮಾಜಿ ಶಾಸಕರ ಪುತ್ರರ ಮದ್ಯೆ ಪೈಪೋಟಿ ಇದೆ ಎಂದು ಹೇಳಲಾಗುತ್ತಿದ್ದು, ಇದುವರೆಗೂ ಯಾರಿಗೆ ಟಿಕೆಟ್ ಸಿಗುತ್ತೆ ಎಂದು ನಿರ್ದಿಷ್ಟವಾಗಿ ಹೇಳಲಾಗುತ್ತಿಲ್ಲ.

ಟಿಕೆಟ್ ಹಂಚಿಕೆ ಸಂಬಂಧಿಸಿದಂತೆ ಹಾಲಪ್ಪ ಆಚಾರ್ ಅವರಾಗಲಿ, ನವೀನ್ ಕುಮಾರ್ ಗುಳಗಣ್ಣನವರ್ ಆಗಲಿ ಎಲ್ಲಿಯೂ ಕೂಡಾ ಬಹಿರಂಗವಾಗಿ ಚರ್ಚೆ ಮಾಡಿಲ್ಲ, ಅಸಮಾಧಾನ ಹೊರ ಹಾಕಿಲ್ಲ, ಅದರ್ ಇಬ್ಬರ ಫ್ಯಾನ್ಸ್ ಮಾತ್ರ ಸೋಶಿಯಲ್ ಮೀಡಿಯಾ ದಲ್ಲಿ ತಮ್ಮ ತಮ್ಮ ನಾಯಕರ ಪರವಾಗಿ ಪೋಸ್ಟ್ ಹಾಕಿ ಅಬ್ಬರಿಸುತ್ತಿದ್ದಾರೆ.

ಟಿಕೆಟ್ ಯಾರಿಗೆ ಸಿಗಲಿ, ಬಿಜೆಪಿ ಪಕ್ಷ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಗೆಲ್ಲುತ್ತದೆ ಎಂದು ಇತರ ಬಿಜೆಪಿ ಮುಖಂಡರು, ಕಾರ್ಯಕರ್ತರು ಹೇಳುತ್ತಿದ್ದಾರೆ.


ಈ ಬಗ್ಗೆ ಹೈಕಮಾಂಡ್ ನಿರ್ಧಾರ ಅಂತಿಮ ಎಂದು ಹಾಲಿ ಶಾಸಕರಾದ ಹಾಲಪ್ಪ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಹೇಳುತ್ತಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಅಬ್ಬರ ಮಾತ್ರ ಜೋರಾಗಿದೆ.

ವರದಿ : ಈರಯ್ಯ ಕುರ್ತಕೋಟಿ




Previous Post Next Post

Contact Form

f="https://unpkg.com/video.js/dist/video-js.css" rel="stylesheet">