CM Siddu : ನಾಳೆ ಪದಗ್ರಹಣ: 8 ರಾಜ್ಯಗಳಿಂದ ಬರುವ ಮುಖ್ಯಮಂತ್ರಿಗಳಿಗೆ Z+ ಭದ್ರತೆ


ನಾಳೆ ಪದಗ್ರಹಣ: 8 ರಾಜ್ಯಗಳಿಂದ ಬರುವ ಮುಖ್ಯಮಂತ್ರಿಗಳಿಗೆ Z+ ಭದ್ರತೆ

******************************** 

ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿದ್ದು, ನಾಳೆ (ಶನಿವಾರ) ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪ್ರತಿಜ್ಞಾವಿಧಿ ಸಮಾರಂಭ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕೇಂದ್ರದ ಘಟಾನುಘಟಿ ನಾಯಕರು ಭಾಗಿಯಾಗಲಿದ್ದು, ಬರುವ ವಿವಿಐಪಿಗಳಿಗೆ Z+, CRPF ASL ಪ್ರೊಟೆಕ್ಟ್ರಿಂದ ಭದ್ರತೆ ಒದಗಿಸಲಾಗಿದೆ.

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಹಿಮಾಚಲಪ್ರದೇಶ ಸಿಎಂ ಸುಖ್ ವಿಂದರ್ ಸಿಂಗ್ ಸುಖು, ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಹಾರ ಸಿಎಂ ನಿತೀಶ್ ಕುಮಾರ್, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಪುದುಚೆರಿ ಸಿಎಂ ರಂಗಸ್ವಾಮಿ, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಮತ್ತು NCP ಮುಖ್ಯಸ್ಥ ಶರದ್ ಪವಾರ್ ಪದಗ್ರಹಣಕ್ಕೆ ಆಗಮಿಸಿದ್ದು, ಮುಖ್ಯಮಂತ್ರಿಗಳಿಗೆ Z+ ಮತ್ತು Z ಕ್ಯಾಟಗರಿ ಭದ್ರತೆ ನೀಡಲಾಗುತ್ತಿದೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">