Gadag : ಅತಿ ಕಡಿಮೆ ಅಂತರದಲ್ಲಿ ವಿಮಾನ ಹಾರಾಟ ; ಗ್ರಾಮಸ್ಥರಲ್ಲಿ ಆತಂಕ.

ಅತಿ ಕಡಿಮೆ ಅಂತರದಲ್ಲಿ ವಿಮಾನ ಹಾರಾಟ ; ಗ್ರಾಮಸ್ಥರಲ್ಲಿ ಆತಂಕ.

 *********************************

 ಗದಗ : ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತುಂಗಭದ್ರಾ ನದಿಯ ಪಾತ್ರದಲ್ಲಿ ವಿಮಾನವೊಂದು ಅತಿ ಕಡಿಮೆ ಅಂತರದಲ್ಲಿ ಹಾರಾಡುತ್ತಿದ್ದು, ಆತಂಕ ಸೃಷ್ಟಿಸಿದೆ.

ಕಳೆದ 2-3 ದಿನಗಳಿಂದ ವಿಮಾನ ಹಾರಾಟ ನಡೆಸಿದೆ ಎಂದು ತಿಳಿದುಬಂದಿದೆ.

ಇದರಿಂದಾಗಿ ಮುಂಡರಗಿ ತಾಲೂಕಿನ ಶೀರನಹಳ್ಳಿ, ಗುಮ್ಮಗೋಳ ಹಲವು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಅತಿ ಕಡಿಮೆ ಅಂತರದಿಂದ ವಿಮಾನ ಹಾರಾಟದಿಂದ ರೈತರು ಜಮೀನಿನಲ್ಲಿ ಕೆಲಸ ಮಾಡಲು ಭಯ ಪಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ವಿಮಾನ ಯಾಕೆ ಕಡಿಮೆ ಅಂತರದಲ್ಲಿ ನಮ್ಮ ಗ್ರಾಮಗಳ ಮೇಲೆ ಹಾರಾಟ ಮಾಡುತ್ತಿದೆ ಎಂದು ಜನರು ಜಿಲ್ಲಾಡಳಿತಕ್ಕೆ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">