ಮೇರಿ ಲೈಫ್ ಮೇರಾ ಸ್ವಚ್ಛ ಸೇಹರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಪ್ರಸನ್ನ ಕಲ್ಯಾಣ ಶೆಟ್ಟಿ.
ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಅವರ ನಿರ್ದೇಶನದಂತೆ " ಮೇರಿ ಲೈಫ್ ಮೇರಾ ಸ್ವಚ್ಛ ಸೇಹರ -ಯೋಜನೆಯ "ನನ್ನ ಲೈಫ್ ನನ್ನ ಸ್ವಚ್ಛ ನಗರ” ಕಾರ್ಯಕ್ರಮವನ್ನು ತುರ್ವಿಹಾಳ ಪಟ್ಟಣ ಪಂಚಾಯತಿವತಿಯಿಂದ ಮೆ 20 ರಿಂದ ಜೂನ್ 06 ರ ವರೆಗೆ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಮಕ್ಕಳ ಹಳೆಯ ಆಟದ ವಸ್ತುಗಳು,ಹಳೆಯ ಬಟ್ಟೆಗಳು, ದಿನಪತ್ರಿಕೆಗಳು, ಹಳೆಯ ಪುಸ್ತಕಗಳು,ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್,ನಿರುಪಯುಕ್ತ ವಿದ್ಯುತ್ ಐಡಿ ಸಾಮಾಗ್ರಿಗಳನ್ನು ಕೂಡಿಸಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನೀಡಲು ಸಾರ್ವಜನಿಕರಲ್ಲಿ ಕೋರಲಾಗಿದೆ.
ಇದಕ್ಕಾಗಿ ಪಟ್ಟಣ ಪಂಚಾಯತಿಯ ಆವರಣದಲ್ಲಿ ಪ್ರತ್ಯೇಕ ಕೇಂದ್ರ ಕುಡಾ ತೆರೆಯಲಾಗಿದೆ. ಈ ಹಳೆಯ ಸಾಮಾಗ್ರಿಗಳನ್ನು ಕೊಟ್ಟು ಸಾರ್ವಜನಿಕರು ಪ್ರೋತ್ಸಾಹದಾಯಕ ಅಥವಾ ಮನೆಯಲ್ಲಿ ಬಳಸಬಹುದಾದ ವಸ್ತುಗಳನ್ನು ಪಡೆದುಕೊಳ್ಳಬಹುದು.ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಸಲು ಮುಖ್ಯಾಧಿಕಾರಿ ಪ್ರಸನ್ನ ಎ.ಕಲ್ಯಾಣಶೆಟ್ಟಿ ತಿಳಿಸಿದ್ದಾರೆ.
ವರದಿ : ಮೆಹಬೂಬ್ ಮೊಮಿನ್