Kampli Breaking : ತಿರುಪತಿಯಿಂದ ಹಿಂತಿರುಗುವ ವೇಳೆ ರಸ್ತೆ ಅಪಘಾತ ಪಟ್ಟಣದ ಮಹಿಳೆ ಸಾವು

ತಿರುಪತಿಯಿಂದ ಹಿಂತಿರುಗುವ ವೇಳೆ ರಸ್ತೆ ಅಪಘಾತ ಪಟ್ಟಣದ ಮಹಿಳೆ ಸಾವು

ಕಂಪ್ಲಿ :

ತಿರುಪತಿಗೆ ಹೋಗಿ ಹಿಂತಿರುಗುವ ವೇಳೆ ಕ್ರೂಸರ್ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿ ಕಂಪ್ಲಿ ಪಟ್ಟಣದ ಮಹಿಳೆಯೊಬ್ಬರು ಸಾವನಪ್ಪಿದ ಘಟನೆ ಆಂದ್ರಪ್ರದೇಶದ ವೈಎಸ್‌ಆರ್ ಜಿಲ್ಲೆಯ ಕೊಂಡಾಪುರ ಮಂಡಲದ ಏಟೂರು ಗ್ರಾಮದ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.

ಕ್ರೂಸರ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಕ್ರೂಸರ್‌ನಲ್ಲಿದ್ದ 17ಜನರಲ್ಲಿ ಕಂಪ್ಲಿಯ ಮಹಿಳೆ ಸೇರಿ ಏಳು ಜನ ಮೃತಪಟ್ಟಿದ್ದಾರೆ. ಗುತ್ತಿಗೆದಾರ ಜಿ.ಭಾಸ್ಕರರೆಡ್ಡಿ ಇವರ ಪತ್ನಿ ಲಕ್ಷಿö್ಮದೇವಿ(40) ಸ್ಥಳದಲ್ಲಿಯೇ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರ ಮಕ್ಕಳಾದ ಮೇಘನಾರೆಡ್ಡಿ(19), ಶಿಲ್ಪಾರೆಡ್ಡಿ(17) ಗಂಭೀರವಾಗಿ ಗಾಯಗೊಂಡಿದ್ದು ಅನಂತಪುರದ ಕೀಮ್ಸ್ ಸವೇರಾ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಮೃತಳ ಅಂತ್ಯಕ್ರಿಯೆ ವೈಎಸ್‌ಆರ್ ಜಿಲ್ಲೆಯ ಜಮ್ಮಲಮಡುಗು ಪಟ್ಟಣದಲ್ಲಿ ಜರುಗಿದೆ.  ರಸ್ತೆ ಅಪಘಾತ ವಿಷಯ ತಿಳಿದು ಗುತ್ತಿಗೆದಾರ ಜಿ.ಭಾಸ್ಕರರೆಡ್ಡಿ ಘಟನಾ ಸ್ಥಳಕ್ಕೆ ತೆರಳಲು ಬೈಕ್‌ನಲ್ಲಿ ಸಾಗಿದ್ದಾಗ ಬಳ್ಳಾರಿ ಬಳಿಯ ಶ್ರೀನಿವಾಸ್ ಕ್ಯಾಂಪ್ ಹೊರವಲಯದಲ್ಲಿ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Reportedd By : Channakeshava

Previous Post Next Post

Contact Form

f="https://unpkg.com/video.js/dist/video-js.css" rel="stylesheet">