Koppal : ಉಚಿತ ಕೌಸ್ಸಿಲಿಂಗ್ ಕಾರ್ಯಕ್ರಮ ಯಶಸ್ವಿ


ಉಚಿತ ಕೌಸ್ಸಿಲಿಂಗ್ ಕಾರ್ಯಕ್ರಮ ಯಶಸ್ವಿ

ಕೊಪ್ಪಳ,: ನಗರದ ಕೇತೇಶ್ವರ ಭವನದಲ್ಲಿ ಶುಕ್ರವಾರ ಎಕ್ಸೆಲ್ ಅಕಾಡೆಮಿಕ್ಸ್ ಸಂಸ್ಥೆ ವತಿಯಿಂದ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಬಗ್ಗೆ ಉಚಿತ ಕೌಸ್ಸಿಲಿಂಗ್ ಕಾರ್ಯಕ್ರಮ  ಯಶಸ್ವಿಯಾಗಿ ಜರುಗಿತ್ತು.

 ಕಾರ್ಯಕ್ರಮದಲ್ಲಿ ಸುಮಾರು 400ಕ್ಕೂ ಹೆಚ್ಚು ಪೋಷಕರು ತಮ್ಮ ಮಕ್ಕಳೊಂದಿಗೆ ಆಗಮಿಸಿ ನೀಟ್, ಸಿಇಟಿ ಹಾಗೂ ಕೆಸೆಟ್ ಬಗ್ಗೆ ಅರ್ಹತೆ, ಕಟಾಯಿಸಿದ ಅಂಕಗಳು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಮೀಸಲಾತಿ ಪ್ರಮಾಣಗಳು, ವಿವಿಧ ಕೋರ್ಸ್‍ಗಳ ಆಯ್ಕೆ, ಉತ್ತಮ ಕಾಲೇಜುಗಳ ಆಯ್ಕೆ, ಆನ್‍ಲೈನ್ ಮೂಲಕ ದಾಖಲಾತಿ ಪ್ರವೇಶ ಪ್ರಕ್ರಿಯೆ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡು ಮಾಹಿತಿ ಪಡೆದರು. 

ಕಳೆದ 15 ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲಿ ಸಿಇಟಿ, ನೀಟ್, ಜೆಇಇ ಪರೀಕ್ಷೆಗಳ ಉಚಿತ ಮಾರ್ಗದರ್ಶನ ಮೂಡಿಸಿರುವ ಎಕ್ಸೆಲ್ ಅಕಾಡೆಮಿಕ್ಸ್‍ನ ವಿದ್ಯಾರ್ಥಿ ಸ್ನೇಹಿ ಪ್ರೇರಕ ಕಾರ್ಯಕ್ರಮವನ್ನು ಪೋಷಕರು ಪ್ರಶಂಶಿಸಿ ಇದರ ಸದುಪಯೋಗವನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಅಕಾಡೆಮಿಕ್ಸ್‍ನ ಡೀನ್ ವರಹಪ್ರಸಾದ, ಮೆಂಟರ ಮುರಳಿಧರ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.

ವರದಿ : ಶಿವಕುಮಾರ ಹಿರೇಮಠ

Previous Post Next Post

Contact Form

f="https://unpkg.com/video.js/dist/video-js.css" rel="stylesheet">