ರಾಯರಡ್ಡಿಗೆ ಹಣಕಾಸು ಖಾತೆ ನೀಡಲು ಒತ್ತಾಯ
ಕುಕನೂರು : ಯಲಬುರ್ಗಾ ಕ್ಷೇತ್ರದಿಂದ ಆಯ್ಕೆಯಾಗಿರುವ ಹಿರಿಯ ರಾಜಕೀಯ ನೇತಾರ, ಅನುಭವಿ ರಾಜಕಾರಿಣಿ ಬಸವರಾಜ್ ರಾಯರಡ್ಡಿ ಅವರಿಗೆ ಉಪ ಮುಖ್ಯಮಂತ್ರಿ ಪಟ್ಟದ ಜೊತೆಗೆ ಹಣಕಾಸು ಇಲ್ಲವೇ ನೀರಾವರಿ ಯಂತಹ ಪ್ರಬಲ ಖಾತೆ ನೀಡಬೇಕು ಎಂದು ಕುಕನೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಿನ್ನಾಳ ಅಗ್ರಹಿಸಿದ್ದಾರೆ.
ಈ ಕುರಿತು ಕುಕನೂರು ಪಟ್ಟಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಬಿನ್ನಾಳ ಅವರು, ಬಸವರಾಜ್ ರಾಯರಡ್ಡಿ ಅವರು ಈ ರಾಜ್ಯ ಕಂಡ ಧೀಮಂತ ನಾಯಕರು, ಹಿರಿಯ ಮತ್ತು ಅನುಭವಿ ರಾಜಕಾರಣಿಯಾಗಿದ್ದಾರೆ, 6 ಸಲ ಶಾಸಕರಾಗಿ ಒಂದು ಸಲ ಲೋಕ ಸಭಾ ಸದಸ್ಯರಾಗಿ, ದೆಹಲಿಯ ವಿಶೇಷ ಪ್ರತಿನಿಧಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ, ಅಲ್ಲದೇ ದೇವೇಗೌಡ ಅವರ ಸಂಪುಟದಲ್ಲಿ ವಸತಿ ಸಚಿವರಾಗಿ, ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ ಅನುಭವಿಗಳಾಗಿದ್ದಾರೆ, ಹೀಗಾಗಿ ರಾಯರಡ್ಡಿ ಅವರಿಗೆ ನೀರಾವರಿ ಇಲ್ಲವೇ ಹಣಕಾಸು ಖಾತೆಯನ್ನು ನೀಡಿದರೆ ಅವರು ಸಮರ್ಥವಾಗಿ ನಿರ್ವಹಿಸಿ ಯಶಸ್ವಿಯಾಗುತ್ತಾರೆ ಎಂದು ಮಲ್ಲಿಕಾರ್ಜುನ ಬಿನ್ನಾಳ ಕಾಂಗ್ರೆಸ್ ವರಿಷ್ಟರನ್ನು ಅಗ್ರಹಿಸಿದ್ದಾರೆ.
ಸದ್ಯ ಕೆ ಪಿ ಸಿ ಸಿ ಉಪಾಧ್ಯಕ್ಷರಾಗಿರುವ ರಾಯರಡ್ಡಿ ಅವರು ಕೊಪ್ಪಳ, ಬಳ್ಳಾರಿ, ಬೀದರ್, ಯಾದಗಿರಿ ಸೇರಿದಂತೆ ಕಲ್ಯಾಣ ಕರ್ನಾಟಕ ದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗೆಲ್ಲಲು ಕಾರಣಿಕರ್ತರಾಗಿದ್ದಾರೆ, ಅವರನ್ನು ಉಪ ಮುಖ್ಯಮಂತ್ರಿ ಮಾಡಿ ಪ್ರಬಲ ಖಾತೆ ನೀಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿನ್ನಾಳ ಒತ್ತಾಯಿಸಿದ್ದಾರೆ.
ವರದಿ : ಈರಯ್ಯ ಕುರ್ತಕೋಟಿ