Kukanuru : ಬಸವರಾಜ್ ರಾಯರಡ್ಡಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಕಲ್ಪಿಸಿ : ಡಾ. ಮಲ್ಲಿಕಾರ್ಜುನ ಬಿನ್ನಾಳ


 ಬಸವರಾಜ್ ರಾಯರಡ್ಡಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಕಲ್ಪಿಸಿ : ಡಾ. ಮಲ್ಲಿಕಾರ್ಜುನ ಬಿನ್ನಾಳ

ಕುಕನೂರು  : ಯಲಬುರ್ಗಾ ಕ್ಷೇತ್ರದಿಂದ ಗೆದ್ದಿರುವ ಬಸವರಾಜ್ ರಾಯರಡ್ಡಿ  ಅವರು ದೂರದೃಷ್ಟಿ ನಾಯಕ, ಅಭಿವೃದ್ಧಿ ಚಿಂತಕ ಅಂತವರು ಸಿದ್ದರಾಮಯ್ಯ ಅವರ ಮಂತ್ರಿ ಮಂಡಲದಲ್ಲಿ ಇರಬೇಕು, ಆದರೆ ಅವರನ್ನು ಸಂಪುಟಕ್ಕೆ ಸೇರಿಸದೆ ಇರುವುದು ಅಭಿವೃದ್ಧಿಗೆ ಹಿನ್ನಡೆ ಆಗಿದೆ ಎಂದು ಕುಕನೂರ್ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಿನ್ನಾಳ ಅಭಿಮತ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಮಲ್ಲಿಕಾರ್ಜುನ ಬಿನ್ನಾಳ್ ಅವರು, ಮಾಜಿ ಸಚಿವ ಬಸವರಾಜ್ ರಾಯರಡ್ಡಿ ಅವರು ರಾಜ್ಯದ ಹಿರಿಯ ನಾಯಕರಾಗಿದ್ದು ಅಭಿವೃದ್ಧಿಯ ಬಗ್ಗೆ ಅನುಭವ ಹೊಂದಿದವರು ಹೀಗಾಗಿ ಅಂತವರನ್ನು ಸಂಪುಟದಿಂದ ಹೊರಗಿರುವುದುಅಭಿವೃದ್ಧಿ ದೃಷ್ಟಿಯಿಂದ ಇಡೀ ರಾಜ್ಯಕ್ಕೆ ಹಿನ್ನಡೆ ಆದಂತೆ ಎಂದು ಡಾ ಮಲ್ಲಿಕಾರ್ಜುನ ಬಿನ್ನಾಳ್  ಹೇಳಿದರು.


30 ವರ್ಷದ ಸುದೀರ್ಘ ರಾಜಕೀಯ ಅನುಭವ ಇರುವ ಬಸವರಾಜ್ ರಾಯರಡ್ಡಿ ಅವರು ಎರಡು ಸಲ ಸಚಿವರಾಗಿ, ಸಂಸದರಾಗಿ, ವಿಶೇಷ ದೆಹಲಿ ಪ್ರತಿನಿಧಿಯಾಗಿ ರಾಜ್ಯದಲ್ಲಿ ಉತ್ತಮ ಹೆಸರು ತಂದುಕೊಟ್ಟಿದ್ದಾರೆ, ಅಭಿವೃದ್ಧಿಯ ಬಗ್ಗೆ ಚಿಂತನೆ, ದುರದೃಷ್ಟಿ ಹೊಂದಿದದ ನಾಯಕ ರಾಯರಡ್ಡಿ, ಅಂತವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಇದ್ದರೆ ರಾಜ್ಯಕ್ಕೆ ಹೆಚ್ಚಿನ ರೀತಿಯ ಅಭಿವೃದ್ಧಿ ಕೆಲಸ ಆಗಲು ಸಹಾಯ ವಾಗುತ್ತದೆ.

ಕಾಂಗ್ರೆಸ್ ಪ್ರಚಾರ ಸಭೆಗೆ ಬಂದಾಗ ಸನ್ಮಾನ್ಯ ಸಿದ್ದರಾಮಯ್ಯ ಅವರು ರಾಯರಡ್ಡಿ ಕ್ರಿಯಾಶೀಲ, ಬುದ್ದಿವಂತ ರಾಜಕಾರಣಿ ಅಂತವರು ಸಚಿವ ಸಂಪುಟದಲ್ಲಿ ಇರಬೇಕು ಎಂದಿದ್ದರು ಅಲ್ಲದೇ ರಾಯರಡ್ಡಿ ಅವರು ಪ್ರಜಾದ್ವನಿ ಯಾತ್ರೆ  ಯಶಸ್ವಿಯಾಗಿ ಸಂಘಟಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣೀಕರ್ತರಾಗಿದ್ದಾರೆ ಹೀಗಾಗಿ ರಾಯರಡ್ಡಿ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಲು ಡಾ. ಮಲ್ಲಿಕಾರ್ಜುನ ಬಿನ್ನಾಳ ಮನವಿ ಮಾಡಿಕೊಂಡಿದ್ದಾರೆ.


ವರದಿ : ಈರಯ್ಯ ಕುರ್ತಕೋಟಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">