ಅರಣ್ಯ ಇಲಾಖೆ ಸಸಿಗಳ ರಿಯಾಯಿತಿ ಕಡಿತಗೊಳಿಸಿರುವುದು ಖಂಡನೀಯ.....ವನಸಿರಿ ಅಮರೇಗೌಡ
ಅರಣ್ಯ ಇಲಾಖೆಯು ಸಾರ್ವಜನಿಕರಿಗೆ ಸಸಿಗಳನ್ನು ಬೆಳೆಸುವ ಯೋಜನೆಯಡಿಯಲ್ಲಿ ವಿತರಿಸುವ ಗಿಡಗಳಿಗೆ ಈ ವರ್ಷ ರಿಯಾಯಿತಿ ಕಡಿತಗೊಳಿಸಿರುವುದನ್ನು ಖಂಡಿಸಿ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವರ್ಷ ಸಾರ್ವಜನಿಕರಿಗೆ ವಿತರಿಸುವ ಸಸಿಗಳ ಮೇಲಿನ ಬೆಲೆಯು ಶೇ.80ರಿಂದ 90 ಇದ್ದ ರಿಯಾಯಿತಿ ದರವನ್ನು ಇದೀಗ ಶೇ.50ಕ್ಕೆ ಇಳಿಸಿ ಪ್ರಧಾನ ಮುಖ್ಯ ಅರಣ್ಯ ಅಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ ವಿವಿಧ ಅಳತೆಗೆ ಸಂಭಂದಿಸಿದಂತೆ 1ರೂ ಗೆ,3ರೂ ಗೆ ಸಿಗುತ್ತಿದ್ದ ಗಿಡಗಳಿಗೆ ಇದೀಗ 5ರೂ,6ರೂ,23ರೂಪಾಯಿಗಳನ್ನು ಕೊಟ್ಟು ಖರಿದಿಸಬೇಕಾಗಿದೆ. ಇದರಿಂದ ಸಾರ್ವಜನಿಕರು ಸಸಿಗಳನ್ನು ಕೊಂಡುಕೊಳ್ಳಲು ಹಿಂದೇಟು ಹಾಕುವಂತಾಗಿದೆ. ಸರ್ಕಾರ ಕೂಡಲೇ ಸಸಿಗಳ ಮೇಲಿನ ದರಗಳ ಬೆಲೆಯನ್ನು ಕಡಿತಗೊಳಿಸಿ ಉಚಿತವಾಗಿ ನೀಡಬೇಕೆಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ತಾಪಮಾನ ಹೊಂದಿದ್ದು ಇದನ್ನು ತಗ್ಗಿಸುವ ನಿಟ್ಟಿನಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಈ ಭಾಗದಲ್ಲಿ ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳಸಲು ಆಸಕ್ತಿ ಹೊಂದಿದ್ದಾರೆ ಆದರೆ ಏಕಾಏಕಿ ಸರ್ಕಾರ ಸಸಿಗಳನ್ನು ದುಬಾರಿ ಬೆಲೆಗೆ ವಿತರಿಸಿದರೆ ಸಾರ್ವಜನಿಕರು ಸಂಘ ಸಂಸ್ಥೆಗಳು ಸಸಿಗಳನ್ನು ಬೆಳೆಸುವಲ್ಲಿ ಸರ್ಕಾರವೇ ಹಿಂದೇಟು ಹಾಕುವಂತೆ ಮಾಡಿದಂತಾಗುತ್ತದೆ.ಜೊತೆಗೆ ಕಲ್ಯಾಣ ಕರ್ನಾಟಕದಲ್ಲಿ ವನಸಿರಿ ಫೌಂಡೇಶನ್ ತಂಡ ಪ್ರತಿವರ್ಷ ಸುಮಾರು 10ರಿಂದ 20ಸಾವಿರ ಸಸಿಗಳನ್ನು ನಟ್ಟು ಪೋಷಿಸುವ ಕಾರ್ಯದಲ್ಲಿ ತೊಡಗಿದೆ.ಜೊತೆಗೆ ಸಾರ್ವಜನಿಕರಿಗೂ ಉಚಿತವಾಗಿ ಸಸಿಗಳನ್ನು ನೀಡಲಾಗುತ್ತಿದೆ ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆಯು ಸಸಿಗಳ ಮೇಲಿನ ದರವನ್ನು ಹೆಚ್ಚುಗೊಳಿಸಿರುವುದು ಪರಿಸರ ಪ್ರೇಮಿಗಳಿಗೆ ಸಂಘ ಸಂಸ್ಥೆಗಳಿಗೆ ಕೊಡಲಿ ಪೆಟ್ಟು ನೀಡಿದಂತಾಗಿದೆ.ಇದನ್ನು ಕೂಡಲೇ ಸರ್ಕಾರ ಸಸಿಗಳ ಮೇಲಿನ ಬೆಲೆಯನ್ನು ಕಡಿತಗೊಳಿಸಿ ಉಚಿತವಾಗಿ ನೀಡಬೇಕು ಇಲ್ಲದಿದ್ದರೆ ಇದರ ವಿರುದ್ಧ ವನಸಿರಿ ಫೌಂಡೇಶನ್ ವತಿಯಿಂದ ರಾಜ್ಯದ ಪ್ರತಿಭಟಿಸಬೇಕಾಗುತ್ತದೆ ಎಂದು ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷ ಅಮರೇಗೌಡ ಮಲ್ಲಾಪೂರ ಆಕ್ರೋಶ ಹೊರ ಹಾಕಿದರು.