ಮಾನಸಿಕ ಒತ್ತಡಕ್ಕೆ ಒಳಗಾಗದಿರಿ : ಡಾ ರಮೇಶ್
ತುರ್ವಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಡಾಕ್ಟರ್ ರಮೇಶ್ ಆಡಳಿತವೈದ್ಯಾಧಿಕಾರಿ ಸ್ಕಿಜೋಪ್ರೇನಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿಶತ 25 ರಷ್ಟು ಜನರು ತಮ್ಮ ಬದುಕಿನ ಯಾವುದಾದರೂ ಘಟ್ಟದಲ್ಲಿ ಒಂದು ಅಥವಾ ಹೆಚ್ಚು ಮಾನಸಿಕ ರೋಗಗಳಿಗೆ ಒಳಗಾಗುತ್ತಾರೆ ಅದರಲ್ಲಿ ಶೇಕಡ ಒಂದರಷ್ಟು ಜನರು ಸ್ಕಿಜೋ ಪ್ರೇನಿಯ ರೋಗಕ್ಕೆ ಒಳಗಾಗುತ್ತಾರೆ ಇದು ಮನಸ್ಸಿನ ಪ್ರಮುಖ ರೋಗವಾಗಿದ್ದು ಅದನ್ನು ಯೌವ್ವನದ ಬಹುದೊಡ್ಡ ಸಾಮರ್ಥ್ಯ ಹಾನಿಕಾರಕ ರೋಗ ಎಂದು ಕರೆಯಬಹುದಾಗಿದೆ ಈ ರೋಗಕ್ಕೆ ಮುಖ್ಯವಾಗಿ
1)ಅನುವಂಶಿಕ ಅಂಶಗಳು 2)ಮೆದುಳಿನ ರಾಸಾಯನಿಕಗಳೆಲ್ಲಾಗುವ ಬದಲಾವಣೆಗಳು
3) ಮಾದಕ ವಸ್ತುಗಳ ವ್ಯಸನ ಕಾರಣವಾಗಿವೆ ಎಂದರು.
ಹಾಗೂ ಡಾಕ್ಟರ್ ಮಂಜುನಾಥ್ ಅಣಗೌಡರ್ ಆಯುಷ್ ವೈದ್ಯಧಿಕಾರಿ ಮಾತನಾಡಿ ವ್ಯಕ್ತಿಯ ಇಡೀ ವ್ಯಕ್ತಿತ್ವವನ್ನು ಹಂತ ಹಂತವಾಗಿ ಕೇಡಿಸುತ್ತಾ ಹೋಗಿ ವ್ಯಕ್ತಿಯ ಭಾವನೆ ವರ್ತನೆ ಮತ್ತು ನಡವಳಿಕೆಯನ್ನು ಹದಗೇಡಿಸುತ್ತದೆ ವ್ಯಕ್ತಿಯು ಸುತ್ತಲಿನ ವಾಸ್ತವದಿಂದ ದೂರ ಸರಿತ್ತಾನೆ ಇದರ ಲಕ್ಷಣಗಳೆಂದರೆ ವರ್ತನೆಯಲ್ಲಿ ಬದಲಾವಣೆ, ಜನರಿಂದ ದೂರ ಇರುವುದು, ಎಲ್ಲರನ್ನೂ ಸಂಶಯದಿಂದ ನೋಡುವುದು, ಏಕಾಗ್ರತೆ ಕಡಿಮೆಯಾಗುವುದು.
ಚಿಕಿತ್ಸೆ :
ಸಮಾಲೋಚನೆ, ಔಷಧಗಳು,ವಿದ್ಯುತ್ ಕಂಪನಗಳು,ಸಾಮಾಜಿಕ ಕಳಂಕವನ್ನು ಹೋಗಲಾಡಿಸುವುದು ಮತ್ತು ರೋಗಿಗಳನ್ನು ಸಮಾಜದ ಮುಖ್ಯ ವಾಹಿನಿಯಲ್ಲಿತರುವದು ವಿಶೇಷವಾಗಿ ಆಯುರ್ವೇದದಲ್ಲಿ ಹೇಳಲಾದ ಮಾನಸಿಕ ಚಿಕಿತ್ಸೆಯು ಹಾಗೂ ಪ್ರಾಣಾಯಾಮ ಯೋಗ ಅತ್ಯಂತ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾಕ್ಟರ್ ಸಂತೋಷ್ಜ,ಜಯಲಕ್ಷ್ಮಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಇದ್ದರು.
Tags
ರಾಜ್ಯ