Koppal : ವಿವಿಧ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ನವ ನಿರ್ಮಾಣ ಸೇನೆ ಮನವಿ


 ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ

ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯ ಸಂಚಾಲಕ ವಿಜಯಕುಮಾರ ಕವಲೂರು ರಿಂದ ಶಿವರಾಜ್ ತಂಗಡಗಿಗೆ ಮನವಿ

ಕೊಪ್ಪಳ,: ಜಿಲ್ಲಾದ್ಯಂತ ವಿವಿಧ ಬೇಡಿಕೆಗಳ ಈಡೇರಿಕೆ ಹಾಗೂ ಜಿಲ್ಲೆಯ ಜ್ವಲಂತ ಸಮಸ್ಯೆ ಮತ್ತು ಜಿಲ್ಲಾ ಅಭಿವೃದ್ಧಿಗಾಗಿ ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯ ಸಂಚಾಲಕ ವಿಜಯಕುಮಾರ ಕವಲೂರು  ಮಂಗಳವಾರ ಹಿಂದುಳಿದ ವರ್ಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿಗೆ ಮನವಿ ಸಲ್ಲಿಸಲಾಯಿತು.

ಬಳಿಕ ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯ ಸಂಚಾಲಕ ವಿಜಯಕುಮಾರ ಕವಲೂರು ಮಾತನಾಡಿ, ಕೊಪ್ಪಳ ಜಿಲ್ಲಾ ಕೇಂದ್ರವಾಗಿದ್ದರೂ ನಗರ ಹಾಗೂ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿವೆ.



 ಕಲ್ಮಲಾ - ಶಿಗ್ಗಾಂವಿ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಗಳ ಅಭಿವೃದ್ಧಿ ಕೈಗೊಂಡು ಸಮಸ್ಯೆಗಳನ್ನು ಬಗೆಹರಿಸಬೇಕು. ನಗರದ ಅಣತೆ ದೂರದಲ್ಲಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳಿಂದ ಹೊರಸೂಸುವ ಕರಿ ಬೂದಿ ನಗರಕ್ಕೂ ಅಂಟಿಕೊಂಡಿದೆ. ಕರೆಬೂದಿ ಇಲ್ಲಿನ ನಾಗರಿಕರ ಮೇಲೆ ಆರೋಗ್ಯ ಸಮಸ್ಯೆ ಬೀರುತ್ತದೆ. ಕೂಡಲೇ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗಬೇಕು.

ಕೈಗಾರಿಕೆಗಾಗಿ ತೆಗೆದುಕೊಂಡಿರುವ ಬಳಸಿಕೊಳ್ಳದೇ ಹಾಗೆ ಉಳಿಸಿಕೊಂಡಿರುವ ಭೂಮಿಯನ್ನು ರೈತರಿಗೆ ಹಿಂದುರುಗಿಸಲು ಕ್ರಮಕೈಗೊಳ್ಳಬೇಕು ಎಂದರು. ಕೊಪ್ಪಳ  ವಿಶ್ವವಿದ್ಯಾಲಯ ಜಿಲ್ಲಾ ಕೇಂದ್ರದಲ್ಲೇ ಉಳಿಯಬೇಕು ಹಾಗೂ ಕುಕನೂರು ತಾಲೂಕು ಮತ್ತು ಯಲಬುರ್ಗಾ ತಾಲೂಕಿನಲ್ಲಿ ಜಿಂಕೆಗಳ ಹಾವಳಿ ಹೆಚ್ಚಾಗಿದ್ದು, ರೈತರ ಬೆಳೆಗಳನ್ನು ಹಾಳು ಮಾಡುತ್ತಿದ್ದು, ಇದರಲ್ಲಿ ರೈತರಿಗೆ ತೊಂದರೆಯಾಗಿದೆ. ಅದಕ್ಕಾಗಿ “ಜಿಂಕೆವನ” ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದರು.

ಹಾಗೆ ವಿದ್ಯುತ್ ದರ ಏರಿಕೆ  ಕುಡಿಯುವ ನೀರಿನ ಸಮಸ್ಯೆ ಮುಂಜಾಗ್ರತೆ  ಜಿಲ್ಲೆಯ ಆರ್‌ಓ ಪ್ಲಾಂಟ್‌ಗಳ ರಿಪೇರಿ,ಜಿಲ್ಲಾದ್ಯಂತ ಇಸ್ಪೀಟ್ ಅಡ್ಡೆಗಳ ಕ್ಲಬ್‌ಗಳು ಹಾವಳಿ ಇದ್ದು, ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲಾ ರಂಗಮಂದಿರ ಕಟ್ಟಡ ಕಾಮಗಾರಿಯನ್ನು ಬೇಗನೇ ಪೂರ್ಣಗೊಳಿಸಬೇಕು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಸಚಿವರಿಗೆ ಮನವಿ ಸಲ್ಲಿಸಿ ರಾಜ್ಯ ಸಂಚಾಲಕ ವಿಜಯಕುಮಾರ ಕವಲೂರು ಒತ್ತಾಯಿಸಿದರು. ಈ ವೇಳೆ ಸಂಘಟನೆಯ ಮರಿಯಪ್ಪ ಮಂಗಳೂರು, ಮಾಂತೇಶ್ ಆದಿಸಿರಿ, ರಫಿ ಲೋಹರ್, ಬಸವರಾಜ ಕೊಪ್ಪಳ, ಗವಿಸಿದ್ದಪ್ಪ ಭಜಂತ್ರಿ, ಆನಂದ ಮಡಿವಾಳರ್, ಶ್ಯಾಮ್ ಬೆನಗಾಳ ಸುನಿಲ್ ಸಂಗಟಿ, ಮುದ್ದಪ್ಪಗೊಂದಿ ಹೊಸಳ್ಳಿ ಸೇರಿದಂತೆ ಅನೇಕರು ಇದ್ದರು.

ವರದಿ : ಶಿವಕುಮಾರ್ ಹಿರೇಮಠ

Previous Post Next Post

Contact Form

f="https://unpkg.com/video.js/dist/video-js.css" rel="stylesheet">