Koppal : ಆರೋಗ್ಯದ ಜೊತೆಗೆ ಕಣ್ಣಿನ ಬಗ್ಗೆ ಕಾಳಜಿವಹಿಸಿ : ರಾಜಶೇಖರ ಆಡೂರ


ಆರೋಗ್ಯದ ಜೊತೆಗೆ ಕಣ್ಣಿನ ಬಗ್ಗೆ ಕಾಳಜಿವಹಿಸಿ : ರಾಜಶೇಖರ ಆಡೂರ

ಕೊಪ್ಪಳ,: ಆರೋಗ್ಯದ ಜೊತೆಗೆ ಕಣ್ಣಿನ ಬಗ್ಗೆ ಕಾಳಜಿವಹಿಸಬೇಕು ಎಂದು ಶ್ರೀಗವಿಸಿದ್ದೇಶ್ವರ ಆರ್ಬನ್ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯರಾದ ರಾಜಶೇಖರಗೌಡ ಎಂ. ಆಡೂರ ಹೇಳಿದರು.

ನಗರದ ಕೇತೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಗವಿಸಿದ್ದೇಶ್ವರ ಆರ್ಬನ್ ಕೋ-ಆಪ್ ಬ್ಯಾಂಕ್ ಹಾಗೂ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಕೊಪ್ಪಳ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಉಚಿತ ನೇತ್ರಾ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲರೂ ಉಚಿತ ನೇತ್ರಾ ತಪಾಸಣಾ ಶಿಬಿರಗಳನ್ನು ಸದುಪಯೋಗಪಡಿಕೊಂಡು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಇದೇ ವೇಳೆ ನೇತ್ರ ವೈದ್ಯರಾದ ಶೃತಿ, ಗಂಗಾ, ಕೊಪ್ಪಳ ಶಾಖೆಯ ಮುಖ್ಯಸ್ಥರಾದ ದೀಪಾ ಎಲ್.ಡಿ, ಮಾರ್ಕೆಟಿಂಗ್ ಮ್ಯಾನೇಜರ್ ಬಸಯ್ಯ ಹಿರೇಮಠ ಅವರನ್ನು ಬ್ಯಾಂಕಿನಿಂದ ಸನ್ಮಾನಿಸಲಾಯಿತು. ಉಚಿತ ನೇತ್ರಾ ತಪಾಸಣಾ ಶಿಬಿರದಲ್ಲಿ ಒಟ್ಟು 244 ಜನರು ನೇತ್ರ ತಪಾಸಣೆ ಮಾಡಿಸಿಕೊಂಡರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಬಸಯ್ಯ ಹಿರೇಮಠ, ನಿರ್ದೇಶಕರಾದ ಬಸವರಾಜ ಶಹಪೂರ, ವಿಶ್ವನಾಥ ಅಗಡಿ, ಗವಿಸಿದ್ದಪ್ಪ ತಳಕಲ್, ಶಿವರಡ್ಡಿ ಭೂಮಕ್ಕನವರ, ರಾಜೇಂದ್ರಕುಮಾರ ಶೆಟ್ಟರ್, ಶಿವಕುಮಾರ ಪಾವಲಿಶೆಟ್ಟರ್, ರಮೇಶ ಕವಲೂರ, ನಾಗರಾಜ ಅರಕೇರಿ, ಸುಮಂಗಲಾ ಸೋಮಲಾಪುರ, ಸೈಯದ್ ಷಹಾನಾಜ್ ಬೇಗಂ, ಜಯಶ್ರೀ ಬಬ್ಲಿ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಪ್ರಭಾಕರ ಜೋಶಿ, ವ್ಯವಸ್ಥಾಪಕ ಮಲ್ಲಿಕಾರ್ಜುನ ಸಿದ್ನೆಕೊಪ್ಪ, ಬ್ಯಾಂಕಿನ ಲೆಕ್ಕಿಗರಾದ ವೀರಮ್ಮ ನರಗುಂದ ಇದ್ದರು.

ವರದಿ : ಶಿವಕುಮಾರ್ ಹಿರೇಮಠ

Previous Post Next Post

Contact Form

f="https://unpkg.com/video.js/dist/video-js.css" rel="stylesheet">