ಕಂಪ್ಲಿ.ಅ.08: ಸೋಲು ಗೆಲುವು ಎನ್ನದೇ, ಪ್ರತಿಯೊಬ್ಬರು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಹಶೀಲ್ದಾರ್ ಗೌಸಿಯಾಬೇಗಂ ಅಭಿಪ್ರಾಯಪಟ್ಟರು.
ಪಟ್ಟಣದ ಎಸ್.ಎನ್.ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕಂಪ್ಲಿ ವಲಯ 1 ರ 49 ನೇ ವಲಯಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವ ಜತೆಗೆ ಕ್ರೀಡೆಗಳಿಗೆ ಪ್ರೋತ್ಸಾಹಿಸಬೇಕು. ಮಕ್ಕಳು ಸ್ಪರ್ಧೆಗಳಲ್ಲಿ ವಿಜಯಶಾಲಿಗಳಾಗಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಸಾಧನೆ ಮಾಡಬೇಕು. ದೈಹಿಕ ಒತ್ತಡಗಳಿಂದ ದೂರವಿರಲು ಕ್ರೀಡೆಗಳು ಅವಶ್ಯಕವಾಗಿವೆ. ಆರೋಗ್ಯದ ಸದೃಢತೆಯಿಂದ ವಿದ್ಯಾರ್ಥಿಗಳಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ದೈಹಿಕ, ಮಾನಸಿಕ ನೆಮ್ಮದಿ ನೀಡುತ್ತವೆ ಎಂದರು.
ನಂತರ ಕ್ರೀಡಾಕೂಟ ವಲಯ-1 ರ ಅಧ್ಯಕ್ಷ ರಾಜಶೇಖರ ಮಾತನಾಡಿ ಕ್ರೀಡೆಯಲ್ಲಿ 26 ಶಾಲೆಯ 600 ಮಕ್ಕಳು10 ವೈಯಕ್ತಿಕ ಆಟಗಳು 4 ಗುಂಪು ಆಟಗಳು ಎರಡು ದಿನ ಜರುಗಲಿದ್ದು ನಂತರ ಬಹುಮಾನ ವಿತರಣೆ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕ್ರೀಡಾ ಕಾರ್ಯಕ್ರಮದ ದಾನಿಗಳಾದ ಪುಲ್ಲಯ್ಯ,ಇಮ್ತಿಯಾಜ್ ಕರೀಂಸಾಬ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವರದಿ : ಚನ್ನಕೇಶವ


