ಚಿತ್ರದುರ್ಗ
ಕೋಟಿ ಕೋಟಿ ಗುಳುಂ ಮಾಡಿ ಬಿಟ್ರಾ ಚಿತ್ರದುರ್ಗ ನಿರ್ಮಿತಿ ಕೇಂದ್ರ ಮಾಜಿ PD.
ಮಾಜಿ ಯೋಜನಾ ನಿರ್ದೇಶಕ ಮೂಡಲಗಿರಿಯಪ್ಪ ವಿರುದ್ದ ಮತ್ತೊಂದು FIR.
FIR ದಾಖಲಾಗುತ್ತಿದ್ದಂತೆ ಮೂಡಲಗಿರಿಯಪ್ಪ ಅರೆಸ್ಟ್.
ಚಿತ್ರದುರ್ಗ ಸೈಬರ್ ಕ್ರೈಂ ಪೊಲೀಸರಿಂದ ಮೂಡಲಗಿರಿಯಪ್ಪ ಬಂಧನ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹಿರಿಯೂರಿನಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮೂಡಲಗಿರಿಯಪ್ಪ
ತಡರಾತ್ರಿ ಮೂಡಲಗಿರಿಯಪ್ಪ ಅವರನ್ನ ಬಂಧಿಸಿರುವ ಪೊಲೀಸರು.
ಬೇನಾಮಿ ಚೆಕ್ ಬಳಸಿ 7 ಕೋಟಿ 4 ಲಕ್ಷದ 45 ಸಾವಿರ ಹಣ ಗುಳುಂ ಆರೋಪ.
ನಿರ್ಮಿತಿ ಕೇಂದ್ರದ ಹಾಲಿ ಯೋಜನಾ ನಿರ್ದೇಶಕ ಸತ್ಯನಾರಾಯಣ ರಾವ್ ದೂರು.
ವಿವಿಧ ಇಲಾಖೆಗಳ, ವಿವಿಧ ಕಾಮಗಾರಿ ಬಿಡುಗಡೆ ಆಗಿದ್ದ ಹಣ ಗುಳುಂ ಆರೋಪ.
ಸರ್ಕಾರಕ್ಕೆ ಮೋಸ ಮಾಡಿ ಹಣ ಲಪಟಾಯಿಸಿದ ಆರೋಪ.
ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ FIR ದಾಖಲು.
IPC 408,406,420,465,468 ಅಡಿ ಕೇಸ್ ದಾಖಲು.
ಈ ಹಿಂದೆಯೂ ಮೊಳಕಾಲ್ಮೂರು, ಚಳ್ಳಕೆರೆ, ನಾಯಕನಹಟ್ಟಿ ಠಾಣೆಗಳಲ್ಲಿ ದೂರು ದಾಖಲಾಗಿತ್ತು.
ಚಿತ್ರದುರ್ಗದ ಗ್ರಾಮಾಂತರ ಠಾಣೆ ಕೇಸ್ ಸೈಬರ್ ಠಾಣೆಗೆ ವರ್ಗಾವಣೆ.
