ಓರ್ವ ವ್ಯಕ್ತಿಯ ರುಂಡ ಕತ್ತರಿಸಿ ಭೀಕರ ಕೊಲೆ
ಗದಗ: ಓರ್ವ ವ್ಯಕ್ತಿಯನ್ನ ಭೀಕರ ಕೊಲೆ ಮಾಡಿ ರುಂಡವನ್ನು ಕತ್ತರಿಸಿ ಕತ್ತರಿಸಿ ರುಂಡವನ್ನೇ ತೆಗೆದುಕೊಂಡು ಹೋದ ಘಟನೆ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಜಮೀನಿನಲ್ಲಿ ನಡೆದಿದೆ.
ತಿಮ್ಮಾಪುರ ಗ್ರಾಮದ ಬಾಲಪ್ಪ ಕೋದಪ್ಪ ಎಂಬುವವರ ಮೆಣಸಿನ ಕಾಯಿ, ಉಳ್ಳಾಗಡ್ಡಿ,ಹೊಲದಲ್ಲಿ ಕಾಯುತ್ತಿದ್ದ ವ್ಯಕ್ತಿಯ ತಲೆಯನ್ನು ಕತ್ತರಿಸಿ ದೇಹ ಅಲ್ಲೇ ಬಿಟ್ಟು ಹೋದ ದುಷ್ಕರ್ಮಿಗಳು.
ಮೆಣಸಿನಕಾಯಿ ಕಾಯಲು ಗುಡಿಸಲಲ್ಲಿ ಮಲಗಿದ್ದ ರೈತನ ಕೊಲೆಯಾಗಿದ್ದು ಗದಗ ಜಿಲ್ಲೆಯ ಮಳೆಕೊಪ್ಪ ಗ್ರಾಮದ ನಿವಾಸಿ ಸಣ್ಣ ಹನುಮಪ್ಪ 58 ಎಂದು ಗುರುತಿಸಲಾಗಿದೆ.
ಮೆಣಸಿನಕಾಯಿ ಕಳ್ಳರ ಹಾವಳಿ ಹಿನ್ನೆಲೆ ಜಮೀನನ್ನ ಕಾಯುತ್ತಿದ್ದವನ ಭೀಕರ ಕೊಲೆ ಕಂಡು ಬೆಚ್ಚಿಬಿದ್ದ ಜಿಲ್ಲೆಯ ರೈತರು ಗದಗ್ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ ಸ್ಥಳಕ್ಕೆ ಗದಗ್ ಗ್ರಾಮೀಣ ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.
ವರದಿ: ವೀರೇಶ್ ಗುಗ್ಗರಿ
.jpeg)
