ನೇಣು ಬಿಗಿದುಕೊಂಡು ಯುವಕನೋರ್ವ ಆತ್ಮಹತ್ಯೆ
ಕಂಪ್ಲಿ :
ತಾಲೂಕಿನ ಮೆಟ್ರಿ ಗ್ರಾಮದ ಜಮೀನೊಂದರಲ್ಲಿ ಮದ್ಯವ್ಯಸನಿಯಾಗಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಬುಧವಾರ ನಸುಕಿನ ಜಾವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜರುಗಿದೆ. ಅಂಕುಶ(24) ನೇಣು ಬಿಗಿದುಕೊಂಡು ಆತ್ಮಹತ್ಯೆಗೀಡಾದ ಯುವಕ. ಲಿಂಗಸೂರಿನಲ್ಲಿದ್ದ ತನ್ನ ತಾಯಿಗೆ ಕುಲುಮೆ ಕೆಲಸಕ್ಕಾಗಿ ಬೇರೊಂದು ಊರಿಗೆ ತೆರಳುವುದಾಗಿ ತಿಳಿಸಿ ಕಳೆದ 15 ದಿನದ ಹಿಂದೆ ಮೆಟ್ರಿ ಗ್ರಾಮಕ್ಕೆ ಆಗಮಿಸಿದ್ದ. ಈತ ಮದ್ಯವ್ಯಸನಿಯಾಗಿದ್ದು, ಮಾಸಿಕವಾಗಿ ಅಸ್ವಸ್ಥನಾಗಿದ್ದ ಎಂದು ತಿಳಿದು ಬಂದಿದೆ.
ಗ್ರಾಮದ ಉಮೇಶಸ್ವಾಮಿ ಎಂಬುವವರ ಹೊಲದ ಬಳಿ ನೇಣಿಗೆ ಶರಣಾಗತನಾಗಿದ್ದ. ಉಮೇಶಸ್ವಾಮಿ ಅವರು ಬುಧವಾರ ನಸುಕಿನ ಜಾವ 4 ಗಂಟೆ ಸುಮಾರಿಗೆ ತಮ್ಮ ಹೊಲಕ್ಕೆ ತೆರಳಿದ್ದಾಗ ಈ ಘಟನೆ ಬೆಳಕಿಗೆ ಬಂದಿದ್ದು ಗ್ರಾಮದಲ್ಲಿದ್ದ ಆತನ ಸಂಬಂಧಿಕರಿಗೆ ಮಾಹಿತಿ ತಿಳಿಸಿದ್ದಾರೆ. ಅಂಕುಶನ ಸಾವಿಗೆ ನಿಖರ ಕಾರಣವೇನೆಂದು ಗೊತ್ತಾಗಿಲ್ಲವಾದರೂ ಆತನ ತಾಯಿ ಮಂಜುಳಾ ಬಾಯಿ ನೀಡಿದ ದೂರಿನ ಮೇರೆ ಇಲ್ಲಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಂಪ್ಲಿ ಮತ್ತು ಸುತ್ತಮುತ್ತಲಿನ ಸುದ್ದಿಗಳನ್ನು ನೋಡಲು ವಾಟ್ಸಪ್ ಗ್ರೂಪ್ Join ಆಗಿ