ಕಂಪ್ಲಿ-ಕೋಟೆ ಚೆಕ್ ಪೋಸ್ಟ್ ನಲ್ಲಿ 8 ಲಕ್ಷ 23 ಸಾವಿರ ರೂ ಹಣವನ್ನು ವಶ-Siddi TV


ಕಂಪ್ಲಿ-ಕೋಟೆ ಚೆಕ್ ಪೋಸ್ಟ್ ನಲ್ಲಿ 8 ಲಕ್ಷ 23 ಸಾವಿರ  ರೂ ಹಣವನ್ನು ವಶ

ಕಂಪ್ಲಿ : 

 ಸಾರ್ವತ್ರಿಕ ಚುನಾವಣೆ ಅಂಗವಾಗಿ ಮಾದರಿ ನೀತಿ ಸಂಹಿತೆಯು ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದು, 91-ಕಂಪ್ಲಿ ವಿಧಾನಸಭಾ ಕ್ಷೇತ್ರದ  ವ್ಯಾಪ್ತಿಯಲ್ಲಿ ಬರುವ ಕಂಪ್ಲಿಕೋಟೆ ಚೆಕ್ ಪೋಸ್ಟ್ ನಲ್ಲಿ ಶುಕ್ರವಾರ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಅನಧಿಕೃತವಾಗಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ  8ಲಕ್ಷ23 ಸಾವಿರ ರೂಪಾಯಿ ಹಣವನ್ನು ವಶಕ್ಕೆ ಪಡೆದ ಕಂಪ್ಲಿ ಪೊಲೀಸರು


ಕಂಪ್ಲಿಯಿಂದ ಗಂಗಾವತಿ ಕಡೆಗೆ ದ್ವಿಚಕ್ರ ವಾಹನದಲ್ಲಿ  ತೆರಳುತ್ತಿದ್ದ ಮೂರು ಬೈಕಗಳಲ್ಲಿ ಮೂರು ಜನರ ಬ್ಯಾಗಗಳನ್ನು ತಪಾಸಣೆ ನಡೆಸುವ ಸಂದರ್ಭದಲ್ಲಿ ಒಂದು ಬ್ಯಾಗನ್ನಲ್ಲಿ 6 ಲಕ್ಷ ಐದು ಸಾವಿರ  ಇನ್ನೋರ್ವನ ಬ್ಯಾಗನ್ನಲ್ಲಿ 1 ಲಕ್ಷ ರೂ ಹಾಗೂ  ಮತ್ತೊಬ್ಬನ ಬ್ಯಾಗನಲ್ಲಿ 1ಲಕ್ಷ 18 ಸಾವಿರ ರೂಪಾಯಿ ಒಟ್ಟಾರೆ ಮೂರು ಜನ ವ್ಯಕ್ತಿಗಳಿಂದ 8ಲಕ್ಷ 23 ಸಾವಿರ ರೂಪಾಯಿಗಳು ಅನಧಿಕೃತವಾಗಿ ಸಾಗಿಸುತ್ತಿದ್ದ ಹಣ ಹಾಗೂ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿರುವ ಲೋಕಸಭಾ ಚುನಾವಣಾ ಎಸ್.ಎಸ್.ಟಿ ತಂಡ ಹಾಗೂ ಕಂಪ್ಲಿ ಪೊಲೀಸ್ ಠಾಣೆಯ 91-ವಿಧಾನಸಭಾ ಕ್ಷೇತ್ರದ ನೋಡಲ್ ಅಧಿಕಾರಿ ಪಿ.ಐ ಪ್ರಕಾಶ ಮಾಳಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕಂಪ್ಲಿ ಪೊಲೀಸ್ ಠಾಣೆಯ ಪಿ.ಐ ಪ್ರಕಾಶ ಮಾಳಿ, ಪಿಎಸ್ಐ ಎನ್.ಶೇಷಾಚಲನಾಯ್ಡು,

ಎಸ್.ಎಸ್.ಟಿ ತಂಡದ ಸಿಬ್ಬಂದಿ ಶ್ರೀಕಾಂತ,ಪೊಲೀಸ್ ಸಿಬ್ಬಂದಿಗಳಾದ ಬಸಪ್ಪ, ಈರಪ್ಪದುದುಮಿ ಸೇರಿದಂತೆ ಅನೇಕ ಉಪಸ್ಥಿತರಿದ್ದರು.

ರಘುವೀರ್, ಸಿದ್ದಿ ಟಿವಿ, ಕಂಪ್ಲಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">