ಲಕ್ಷ್ಮೇಶ್ವರ: ಪಟ್ಟಣದ ಬಿಸಿಎನ್ ಸಿರಿ ವಿಜ್ಞಾನ ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಟಿ ಮಾತನಾಡಿದ ಅವರು, ಆರ್ಥಿಕ ಸಮಸ್ಯೆ ಉತ್ತಮ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳ ಸಮಸ್ಯೆ ಇವುಗಳ ನಡುವೆ. ಆನೇಕ ವಿದ್ಯಾವಂತ ಮಕ್ಕಳು, ಪಾಲಕರು ತಮ್ಮ ಕನಸಿನಿಂದ ವಂಚಿತರಾಗುತ್ತಿದ್ದು, ಅದಕ್ಕಾಗಿ ಮಕ್ಕಳ ಕನಸನ್ನು ನನಸು ಮಾಡುವ ಉದ್ದೇಶದಿಂದ ಸಿರಿ ಸಂಸ್ಥೆಯ ಸಹಯೋಗದಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ , ಪಾಲಕರು, ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಸುಮಾರು 280 ವಿದ್ಯಾರ್ಥಿಗಳು ಪ್ರವೇಶಪಡೆದಿದ್ದು, ಈ ವರ್ಷ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಇಚ್ಛೆಯನ್ನು ಹೊಂದಿದ್ದೇವೆ. ಸಿರಿ ಅಕ್ಕಾಡೆಮಿಯೊಂದಿಗೆ ಸಹಯೋಗ ಮಾಡಿಕೊಂಡ ಮೇಲೆ ದ್ವಿತಿಯ ಪಿಯುಸಿ ಪ್ರಥಮ ತಂಡ ಈ ವರ್ಷ ಉತ್ತಮ ಫಲಿತಾಂಶದೊಂದಿಗೆ ಹೊರಬೀಳಲಿದೆ ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ. ಈ ನಿಟ್ಟಿನಲ್ಲಿ ನೀಟ್, ಜೆಇಇ. ಸಿಇಟಿ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಕ್ಯಾಶ ಕೋರ್ಶ ಮೂಲಕ ತರಬೇತಿ ನೀಡಲಾಗುತ್ತಿದ್ದು, ಈ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲಿದ್ದಾರೆ ಎಂದು ಹೇಳುತ್ತೇವೆ. ಈ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೀಡಲಾಗುವ ತರಬೇತಿಗೆ ವಿದ್ಯಾರ್ಥಿಗಳು ಸದುಪಯೋಗಪಡೆದುಕೊಳ್ಳಬೇಕೆಂದು ಮನವಿ ಮಾಡುವವಾಗಿ ಹೇಳಿದರು. ಈ ವರ್ಷದ ಜೆಇಇ ಪರೀಕ್ಷೆಯಲ್ಲಿ ಕಾಲೇಜಿನ ಶ್ರೀದೇವಿ ಜೋಳದ ಮತ್ತು ಸುಪ್ರೀಯಾ ನಾಯಕ ಗದಗ ಜಿಲ್ಲೆಗೆ ಉತ್ತಮ ಸ್ಥಾನ ಪಡೆದಿದ್ದು, ಉಳಿದಂತೆ ಅನೇಕರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಲು ಹೆಮ್ಮೆ.
ಪ್ರಾಚಾರ್ಯ ವಿಜಯಕುಮಾರ ಮಾತನಾಡಿ ಎಸ್‌ಎಸ್‌ಎಲ್‌ಸಿ ಮುಗಿಸಿದ ನಂತರ ಈ ಭಾಗದ ಮಕ್ಕಳು ಬೇರೆ. ಬೇರೆ ಊರಿಗೆ ಹೋಗಿ ಕಲಿಯುವಂತಾಗಿತ್ತು. ಆದರೆ, ಇದೀಗ ಇಲ್ಲಿಯೇ ಎಲ್ಲ ಎಲ್ಲ ಸೌಲಭ್ಯ ಸ ದೊರೆಯುವಂತೆ ಮಾಡಲಾಗಿದೆ. ಸಿಇಟಿ, ನೀಟ್, ಜೆಇಇ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡುವ ಅವಕಾಶಗಳ ಇಲ್ಲಿನವರಿಗೆ ದೊರೆಯುತ್ತದಂತಾಗಿತ್ತು. ಈ ಕೊರತೆ ನೀಗಿಸುವ ಉದ್ದೇಶದಿಂದ ಕಾಲೇಜು ಪ್ರಾರಂಭಿಸಿದ್ದು, ಈಗಾಗಲೇ ನುರಿತ ಮತ್ತು ಅನುಭವಿ ಉಪನ್ಯಾಸಕ ವೃಂದ ಕೆಲಸ ನಿರ್ವಹಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಉಪನ್ಯಾಸಕರು ಹಾಜರಿದ್ದರು.
ವರದಿ: ವೀರೇಶ್ ಗುಗ್ಗರಿ