ಹೋಳಿ ಮತ್ತು ರಂಜಾನ ಹಬ್ಬವನ್ನು ಶಾಂತಿಯುತ ಹಾಗೂ ಸೌಹಾರ್ದತೆಯಿಂದ ಆಚರಿಸಿ : ನಾಗರಾಜ ಕೆ. ಪಿಎಸ್ಐ-Siddi TV


ಹೋಳಿ ಮತ್ತು ರಂಜಾನ ಹಬ್ಬವನ್ನು ಶಾಂತಿಯುತ ಹಾಗೂ ಸೌಹಾರ್ದತೆಯಿಂದ ಆಚರಿಸಿ : ನಾಗರಾಜ ಕೆ. ಪಿಎಸ್ಐ.

ತುರ್ವಿಹಾಳ:-ಹೋಳಿ ಹಾಗೂ ರಂಜಾನ ಹಬ್ಬವು ಹಿಂದು-ಮುಸ್ಲಿಂ ಐಕ್ಯತೆಯ ಸಾರುವ ಹಬ್ಬಗಳಾಗಿದ್ದು, ಎಲ್ಲ ಧರ್ಮದವರು ಕೂಡಿಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಸರ್ಕಾರದ ನಿಯಮ ಉಲ್ಲಂಘಿಸದೆ ರಂಜಾನ,ಹೋಳಿ ಹಬ್ಬ ಆಚರಿಸಬೇಕು. ಯಾವುದೇ ಹಬ್ಬ ಹರಿದಿನಗಳಲ್ಲಿ ಸಹೋದರ ಮನೋಭಾವ ದಿಂದ ಇರಬೇಕು ಎಂದು ತುರ್ವಿಹಾಳ ಠಾಣಾಧಿಕಾರಿ ನಾಗರಾಜ ಎಮ್ ಕೊಟಗಿ. ಹೇಳಿದರು.


ನಂತರ ಮುಸ್ಲಿಂ ಸಮಾಜದ ಮುಖಂಡ ಸಿರಾಜ್ ಪಾಷಾ ದಳಪತಿ ಮಾತನಾಡಿ, ಹಿಂದಿನಿಂದಲೂ ಪಟ್ಟಣದಲ್ಲಿ ಎಲ್ಲ ಸಮಾಜದ ಬಾಂಧವರು ಅಣ್ಣ-ತಮ್ಮಂದಿರಂತೆ ಬಾಳುತ್ತಿದ್ದೇವೆ.ಇಲ್ಲಿ ಎಲ್ಲ ಧರ್ಮದವರು ಸೇರಿಕೊಂಡು ಎಲ್ಲಾ ಹಬ್ಬಗಳನ್ನು ಶಾಂತಿ-ಸುವ್ಯವಸ್ಥೆ ಕದಡದಂತೆ ಆಚರಿಸುತ್ತಾ ಬರಲಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಉರಿನ ಮುಖಂಡರಾದ ಮೌಲಪ್ಪಯ್ಯ ಗುತ್ತೇದಾರ ಶಾಮೀದ ಸಾಬ್ ಚೌದ್ರಿ, ಉಮರ್ ಸಾಬ್, ಕರಿಯಪ್ಪ ಭಂಗಿ, ಖಾಜಾಮೈನುದ್ದಿನ್, ಬಸವರಾಜ ಗೌಡ, ಡಿ.ಶಂಕರಗೌಡ, ಅನ್ವರ್ ಪಾಷಾ ದಳಪತಿ, ಶೇಖ ಮಹೇಬೂಬ, ಹೋನ್ನುರಪ್ಪ ಕುಂಬಾರ, ಮಲ್ಲೇಶ ಬಡಿಗೇರ, ಕನಕರಾಯ ಆನೆಗುಂದಿ, ಮಹ್ಮದ್ ಮುಸ್ತಾಫ, ನವಾಬ್ ಷರೀಫ್ ಹಾಗೂ ವಿವಿಧ ಹಳ್ಳಿಗಳ ಮುಖಂಡ. ಸಭೆಯಲ್ಲಿ ಭಾಗವಹಿಸಿದ್ದರು.


*ರಿಪೋರ್ಟರ್ ಮೆಹಬೂಬ ಮೊಮೀನ.*

Previous Post Next Post

Contact Form

f="https://unpkg.com/video.js/dist/video-js.css" rel="stylesheet">