Kampli : ಕಂಪ್ಲಿಯ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ Bsc ಕೊರ್ಸ್ ಆರಂಭಿಸಿ : CA ಚನ್ನಪ್ಪ


ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆ ವತಿಯಿಂದ ಕಂಪ್ಲಿಯ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ Bsc ಕೋರ್ಸ್‌ ಆರಂಭಿಸುವಂತೆ ತಹಶಿಲ್ದಾರರ ದ್ವಾರ ಜಿಲ್ಲಾಧಿಕಾರಿಗಳಿಗೆ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.


ಈ ವೇಳೆ ಮಾತನಾಡಿದ DSS ಸಂಘಟನೆಯ ತಾಲೂಕ ಅಧ್ಯಕ್ಷ  ಸಿ.ಎ. ಚನ್ನಪ್ಪ, ಪಟ್ಟಣದ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ Bsc ಆರಂಭಿಸುವಂತೆ ನಿರಂತರ ಒತ್ತಾಯಿಸಲಾಗುತ್ತಿದೆ. ಆದರೆ ಫಲಿತಾಂಶ ಶೂನ್ಯವಾಗಿದೆ. ಬಡವರ ಮಕ್ಕಳು, ರೈತಾಪಿ ವರ್ಗದ ಮಕ್ಕಳು ಸಾವಿರಾರು ರೂಪಾಯಿ ಖರ್ಚು ಮಾಡಿ ದೂರದ ಊರಿನ ಕಾಲೇಜಿಗೆ ಹೋಗುವಂತ ಪರಿಸ್ಥಿತಿ ಎದುರಾಗಿದೆ. ಕೂಡಲೇ ಕಾಲೇಜಿನಲ್ಲಿ Bsc ಕೋರ್ಸ್ ಪ್ರಾರಂಭಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನ ಹೋರಾಟ ಮಾಡಲಾಗುವುದು ಎಂದರು.

ಇನ್ನು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ಮತ್ತು DSS ಸಂಘದ ಸದಸ್ಯರು ಉಪಸ್ಥಿತರಿದ್ದರು .

ರಘುವೀರ್, ಸಿದ್ದಿ ಟಿವಿ, ಕಂಪ್ಲಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">