Kampli : ಮರಗಳನ್ನು ಮಕ್ಕಳಂತೆ ಜೋಪಾನ ಮಾಡಿ : ಹೆಚ್ .ಮರಿಯಪ್ಪ


ಮರಗಳನ್ನು ಮಕ್ಕಳಂತೆ ಜೋಪಾನ ಮಾಡಿ : ಹೆಚ್ .ಮರಿಯಪ್ಪ

ಕಂಪ್ಲಿ:

ಕಾಡುಗಳ ನಾಶದಿಂದ ಪರಿಸರ ಅವಸಾನದತ್ತ ಸಾಗುತಿದ್ದು ಇದರಿಂದ ಭೂಕಂಪ,ಸುನಾನಿ,ಅತಿವೃಷ್ಟಿ ಅನಾವೃಷ್ಟಿಗಳ ಸಂಭವಿಸುತ್ತವೆ. ಆಗಾಗಿ ಪ್ರತಿಯೊಬ್ಬರೂ ಗಿಡಮರಗಳನ್ನು  ನೆಡುವುದರ ಮೂಲಕ ಅವುಗಳನ್ನು ಮಕ್ಕಳಂತೆ ನೋಡಿಕೊಳ್ಳಿ ಎಂದು ಕಂಪ್ಲಿಯ ನಿವೇದಿತಾ ಪ್ರೌಢಶಾಲೆಯ ಮುಖ್ಯಗುರು ಹೆಚ್.ಮರಿಯಪ್ಪ ತಿಳಿಸಿದರು.

 ನಿವೇದಿತಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ, ಸಸಿ ನೆಡುವ ಮೂಲಕ ಮಕ್ಕಳಿಗೆ ಪರಿಸರ ಜಾಗೃತಿ ಕುರಿತು ತಿಳಿಸಿದರು.

ಪರಿಸರ ರಕ್ಷಿಸುವ ಜವಾಬ್ದಾರಿ ಮಾನವರದ್ದಾಗಿದೆ. ಆದರೆ ಬಹುಪಾಲು ಜನರು ಇದನ್ನು ಸರಿಯಾಗಿ ನಿಭಾಯಿಸುತ್ತಿಲ್ಲ.

 ಜೂನ್‌ 5ರಂದು ಶಾಲೆಗಳಲ್ಲಿ ಸೇರಿದಂತೆ ಹಲವೆಡೆ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಆದರೆ ಇದು ಇನ್ನೂ  ಪೋಟೋಗಳಿಗೆ ಮಾತ್ರ ಸೀಮಿತವಾಗಿದೆ. ಮಾತ್ರವಲ್ಲದೇ ಪರಿಸರ ಸಂರಕ್ಷಣೆ ಕೇವಲ ಪರಿಸರ ದಿನಾಚರಣೆಗೆ ಮಾತ್ರವೇ ಸೀಮಿತವಾದಂತಿದೆ. ಜೊತೆಗೆ ಕೆಲವು ಭಾಷಣಗಳಿಗೆ ಮಾತ್ರ ಸಾಕ್ಷಿಯಾಗಿದೆ. ಈ ದಿನಕ್ಕಿರುವ ಮಹತ್ವವನ್ನು ಪ್ರತಿಯೊಬ್ಬ ವ್ಯಕ್ತಿಯೂ ಅರಿಯಬೇಕಾಗಿದೆ , ಪರಿಸರ ಉಳಿಸಲು ನಿತ್ಯವೂ ಗಿಡ ಮರಗಳನ್ನು ಉಳಿಸಿ, ಬೆಳೆಸುವ ಕೆಲಸದ ಜೊತೆಗೆ ಮಕ್ಕಳಂತೆ ಜೋಪಾನ ಮಾಡುವ ಕೆಲಸ ನಮ್ಮೆಲ್ಲರದ್ದಾಗಿದೆ ಎಂದರು.

ನಂತರ ಶಾಲೆಯ ಆವರಣದಲ್ಲಿ 30 ಸಸಿಗಳನ್ನು  ನೆಡಲಾಯಿತು.ಶಾಲಾ ಮಕ್ಕಳಿಂದ ಹಾಗೂ ಶಿಕ್ಷಕರಿಂದ ಎಲ್ಲಾ ಸಸ್ಯಗಳಿಗೆ ನೀರನ್ನು ಹಾಕಿಸಿ, ಸಸ್ಯಗಳನ್ನು ಪ್ರತಿಯೊಂದು ಮನೆಗಳಲ್ಲಿ ಹಳ್ಳಿಗಳಲ್ಲಿ ಬೆಳೆಸಿ ನೀರನ್ನು ಮಿತವಾಗಿ ಬಳಸಿ ಪರಿಸರವನ್ನು ಉಳಿಸಿ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಎಂ. ಪುಷ್ಪಾ ಕಾರ್ಯದರ್ಶಿ ಕೆ.ರಾಮು ಸೇರಿದಂತೆ  ಶಿಕ್ಷಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

Previous Post Next Post

AD

 


Siddi TV

Contact Form

f="https://unpkg.com/video.js/dist/video-js.css" rel="stylesheet">