Kampli : KEB ಕಚೇರಿಯಲ್ಲಿ ಕೋತಿಯ ಆಟ್ಟಹಾಸ


KEB ಕಚೇರಿಯಲ್ಲಿ ಕೋತಿಯ ಆಟ್ಟಹಾಸ

ಕಂಪ್ಲಿ : ನಗರದ ಕೆಇಬಿ ಕಚೇರಿ ಆವರಣದಲ್ಲಿ ಜನರನ್ನ ಕಚೇರಿಯ ಒಳಗಡೆ ಬಿಡದೆ, ಜನರ ಮೇಲೆ ದಾಳಿ ಮಾಡಲು ಮುಂದಾಗುತ್ತಿದೆ.

ನಿನ್ನೆಯಷ್ಷೇ ಕೊಟ್ಟಾಲ್ ಗ್ರಾಮದಲ್ಲಿ ಒಂದು ಕೋತಿಯನ್ನು ಹಿಡಿದು ಕಾಡಿಗೆ ಬಿಡಲಾಗಿತ್ತು, ಆದರ ಬೆನ್ನಲ್ಲೇ ಮತ್ತೊಂದು ಕೋತಿ ಇಂದು ಕಂಪ್ಲಿಯ ಕೆಇಬಿಯಲ್ಲಿ ತನ್ನ ಹುಚ್ಚಾಟವನ್ನು ಮೆರೆದಿದೆ.

ಜನರಿಗೆ ಹುಚ್ಚೋ ಅಥವಾ ಕೋತಿಗೆ ಹುಚ್ಚೋ..!?

ತನ್ನ ಪಾಡಿಗೆ ತಾನು ಉಂಟು ತನ್ನ ಕೆಲಸ ಉಂಟು ಎಂಬಂತೆ ಕುಳಿತ ಕೋತಿಗೆ ಸುಮ್ಮ ಸುಮ್ಮನೆ ಕಲ್ಲು ತೂರಿದ ಜನರಿಗೆ ಓಡಾಡಿಸಿ ದಾಳಿ ಮಾಡಲು ಯತ್ನಿಸಿದೆ.

ಸ್ಥಳೀಯರನ್ನ ವಿಚಾರಿಸಿದಾಗ ನಿನ್ನೆ ರಾತ್ರಿಯಿಂದಲೇ ಕೆಇಬಿ ಪಕ್ಕದ ಓಣಿಯಲ್ಲಿ ಜನರ ಮೇಲೆ ದಾಳಿ ನಡೆಸುತ್ತಿತ್ತು, ಬೆಳಿಗ್ಗೆಯಿಂದ ಕೆಇಬಿ ಆವರಣದಲ್ಲಿ ಬಂದಿದೆ ಎಂದು ಹೇಳಿದರು.

ಇನ್ನು ಈ ಕೋತಿಗಳ ಹಾವಳಿ ನಗರದಲ್ಲಿ ಹೆಚ್ಚಾಗುತ್ತಿದ್ದು, ತಕ್ಷಣವೇ ಅರಣ್ಯ ಇಲಾಖೆ ಹಾಗೂ ಪುರಸಭೆಯವರು ಈ ಕೋತಿಯನ್ನ ಹಿಡಿದು ಕಾಡಿಗೆ ಬಿಡಬೇಕು ಎಂದು ಜನರು ಒತ್ತಾಯಿಸಿದ್ರು..



Previous Post Next Post

Contact Form

f="https://unpkg.com/video.js/dist/video-js.css" rel="stylesheet">