ಬೆಂಗಳೂರು: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ಸದಸ್ಯರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. 2023ರ ಮಾರ್ಚ್ 15ರಂದು ಎಲ್ಲಾ ಸಾಂಸ್ಕೃತಿಕ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು ಸದಸ್ಯರನ್ನು ನೇಮಕ ಮಾಡಿದ್ದ ಸರ್ಕಾರ ಕೊಡವ ಸಾಹಿತ್ಯ ಅಕಾಡೆಮಿಗೆ ಕೇವಲ ಅಧ್ಯಕ್ಷರನ್ನಷ್ಟೇ ನೇಮಿಸಿತ್ತು. ಇದೀಗ ಅಕಾಡೆಮಿಗೆ 12 ಮಂದಿ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ.
ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ನಿವಾಸಿ ಪಂ. ಪುಟ್ಟರಾಜ ಗವಾಯಿ ರವರ ಶಿಷ್ಯರು ಹಾಗೂ ಸಂಗೀತ ನಿರ್ದೇಶಕರಾದ ರಾಜು ಎಮ್ಮಿಗನೂರ ಅವರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ತಿಳಿಸಿದ್ದಾರೆ