ಬಾಳಿ ಬದುಕಬೇಕಿದ್ದ ಯುವ ದಂಪತಿ ಬಾಳಲಿ ವಿಧಿಯ ಕ್ರೂರ ದೃಷ್ಟಿ ನೇಣಿಗೆ ಶರಣು ಕುಟುಂಬದ ಆಕ್ರಂದನ....
ಸಿರುಗುಪ್ಪ : ತಾಲೂಕಿನ ಮಣ್ಣೂರು ಸೂಗೂರು ಗ್ರಾಮದ ಬಳಿಯ ದೊಡ್ಡ ರಾಜು ಕ್ಯಾಂಪ್ ನಲ್ಲಿ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಪತಿ ಅಮರೇಶ (24) ಮತ್ತು ಪತ್ನಿ ಶೃತಿ(20) ಆತ್ಮಹತ್ಯೆಗೆ ಶರಣಾದ ದಂಪತಿ ಎಂದು ತಿಳಿದುಬಂದಿದೆ.ಮದುವೆಯಾಗಿ ಒಂದು ವರ್ಷ ಕಳೆದಿದ್ದು, ಕಾರಣ ತಿಳಿದು ಬಂದಿಲ್ಲ, ಅಮರೇಶ್ ಶೃತಿಯನ್ನು ಹೆಚ್ಚು ಪ್ರೀತಿಸುತ್ತಿದ್ದ ಎಂಬ ಮಾಹಿತಿ ಕುಟುಂಬದವರು ತಿಳಿಸಿರುತ್ತಾರೆ. ಕುಟುಂಬದ ಸದಸ್ಯರು ಹೊಲಕ್ಕೆ ತೆರಳಿದ ಸಂದರ್ಭದಲ್ಲಿ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಚಂದನ್ ಗೋಪಾಲ್ ಪಿ ಎಸ್ ಐ ಶಶಿಧರ ವೈ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
