Turvihal::ಸಮುದಾಯದ ಅಭಿವೃದ್ಧಿಗಾಗಿ ಮನವಿ : ಫಾರೂಖ್ ಸಾಬ್ ಖಾಜಿ


ಸಮುದಾಯದ ಅಭಿವೃದ್ಧಿಗಾಗಿ ಮನವಿ : ಫಾರೂಖ್ ಸಾಬ್ ಖಾಜಿ

ತುರ್ವಿಹಾಳ ಪಟ್ಟಣದ ಮುಖಂಡರಿಂದ  ಸೋಮವಾರ ರಾಯಚೂರು ವಕ್ಫ್ ಮಂಡಳಿಯ ಜಿಲ್ಲಾ ಅಧ್ಯಕ್ಷರಾದ ಫರೀದ್ ಖಾನ್ ಅವರನ್ನು ಬೇಟಿಯಾಗಿ ಪಟ್ಟಣದಲ್ಲಿ ಸಮುದಾಯ ಭವನ,ಕಬರಸ್ತನ್, ಇದ್ಗಾ ಮೈದಾನ ಅಭಿವೃದ್ಧಿ ಗಾಗಿ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿನ ಮುಸ್ಲಿಂ ಸಮುದಾಯ ಸರ್ಕಾರದ ಯೋಜನೆಗಳನ್ನು ಪಡೆಯಲು ಅನುದಾನವಿಲ್ಲದೆ ಹಾಗೇ ಅರೆಬರೆಯಾಗಿದ್ದು, ಖಬರ್ ಸ್ತಾನ್, ಈದ್ಗ ಮೈದಾನ ಹಾಗೂ ಪಟ್ಟಣದಲ್ಲಿನ ಮುಸ್ಲಿಂ ಬಾಂಧವರಿಗೆ ಒಂದು ಸಮುದಾಯ ಭವನ ವಿಲ್ಲದಂತಾಗಿದ್ದು. ವಕ್ಪ್ ಮಂಡಳಿ ಯಿಂದ ಅನುದಾನ ನೀಡಿ ಅಭಿವೃದ್ಧಿ ಕಾಮಗಾರಿಗೆ ನಾಂದಿ ಹಾಡಬೇಕೆಂದು ವಕ್ಫ್ ಮಂಡಳಿ ಜಿಲ್ಲಾಧ್ಯಕ್ಷರಾದ ಫರೀದ್ ಖಾನ್ ಅವರಿಗೆ ಮನನಿ ಪತ್ರ ನಿಡುವ ಮೂಲಕ ಅಲ್ಪಸಂಖ್ಯಾತ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಫಾರುಖ್ ಸಾಬ್ ಖಾಜಿ ತಿಳಿಸಿದರು ಒತ್ತಾಯಿಸಿದರು.

ನಂತರ ತುರ್ವಿಹಾಳ ಪಟ್ಟಣದ ಯುವ ಮುಖಂಡರಿಂದ ಅಲ್ಪಸಂಖ್ಯಾತ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಫಾರೂಖ್ ಸಾಬ್ ಖಾಜಿ ಹಾಗೂ ವಕ್ಫ್ ಮಂಡಳಿಯ ಜಿಲ್ಲಾ ಅಧ್ಯಕ್ಷ ಫರೀದ್ ಖಾನ್ ಅವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹಸನಸಾಬ್ ಖಾಜಾಸಾಬ ಚೌದ್ರಿ, ಅನ್ವರ್ ಪಾಷಾ, ಬಿಲಾಲ್ ಚೌದ್ರಿ, ಮಹ್ಮದ್ ಬುಡ್ಡಸಾಬ, ಸಿಕಂದರ್, ಇದ್ದರು.

Previous Post Next Post

AD

 


Siddi TV

Contact Form

f="https://unpkg.com/video.js/dist/video-js.css" rel="stylesheet">