Viral : ಗಂಗಾವತಿಯಲ್ಲಿ ಮೊದಲ ಪ್ರಕರಣ ಅಪ್ರಾಪ್ತನಿಗೆ ಬೈಕ್ ರೈಡಿಂಗ್ 25 ಸಾವಿರ ದಂಡ.!


ಗಂಗಾವತಿಯಲ್ಲಿ ಮೊದಲ ಪ್ರಕರಣ ಅಪ್ರಾಪ್ತನಿಗೆ ಬೈಕ್ ರೈಡಿಂಗ್ 25 ಸಾವಿರ ದಂಡ.!

ಗಂಗಾವತಿ: ಅಪ್ರಾಪ್ತ ಬಾಲಕನಿಗೆ ಸಾರ್ವಜನಿಕ ಸ್ಥಳದಲ್ಲಿ ಓಡಿಸಲು ಬೈಕ್ ನೀಡಿದ್ದಕ್ಕಾಗಿ ಪಾಲಕರಿಗೆ 25 ಸಾವಿರ ರೂಪಾಯಿ ಮೊತ್ತದ ದಂಡ ವಿಧಿಸಿ ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಆದೇಶ ಮಾಡಿದ್ದಾರೆ. 

ಗಂಗಾವತಿಯಲ್ಲಿ ಇಷ್ಟು ಮೊತ್ತದ ದಂಡ ವಿಧಿಸುತ್ತಿರುವ ಮೊದಲ ಪ್ರಕರಣ ಇದಾಗಿದೆ. ಜಯನಗರದ ನಿವೃತ್ತ ಸರ್ಕಾರಿ ನೌಕರರೊಬ್ಬರ 16 ವರ್ಷದ ಬಾಲಕ ಬೈಕ್ ಚಲಾಯಿಸಿಕೊಂಡು ಬಂದಿದ್ದರು. ಮಾರ್ಚ್ 23ರಂದು ನಗರದ ಪಂಪಾನಗರದಲ್ಲಿ ತಡೆದು ನಿಲ್ಲಿಸಿದ್ದ ಸಂಚಾರಿ ಠಾಣೆಯ ಪಿಎಸ್‌ಐ ಶಾರದಮ್ಮ, ದಂಡ ಹಾಕಿದ್ದರು.

ಈ ಬಗ್ಗೆ ಗುರುವಾರ ವಿಚಾರಣೆ ನಡೆಸಿದ ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ನಾಗೇಶ ಪಾಟೀಲ್, ದಾಖಲಾದ ದೋಷಾರೂಪ ಪಟ್ಟಿಯ ಹಿನ್ನೆಲೆ ಮೊಟಾರು ವಾಹನ ಕಾಯ್ದೆ ಉಲ್ಲಂಘನೆಯ ಆರೋಪದಿ ಅಪ್ರಾಪ್ತ ಬಾಲಕನ ಪಾಲಕರಿಗೆ 25 ಸಾವಿರ ಮೊತ್ತದ ದಂಡ ವಿಧಿಸಿ ಆದೇಶ ಮಾಡಿದ್ದಾರೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">