ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ 4 ಕುಮ್ಕಿ ಆನೆಗಳ ಹಸ್ತಾಂತರ


ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ನಾಲ್ಕು ಕುಮ್ಆಕಿ ನೆಗಳ ಹಸ್ತಾಂತರ

ಬೆಂಗಳೂರು: ಕರ್ನಾಟಕ ಸರ್ಕಾರ ನಾಲ್ಕು ಕುಮ್ಮಿ(ಕುಂಕಿ) ಆನೆಗಳನ್ನು ಆಂಧ್ರಪ್ರದೇಶಕ್ಕೆ ಅಧಿಕೃತವಾಗಿ ಹಸ್ತಾಂತರಿಸಿದೆ. ಬುಧವಾರ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಆನೆಗಳನ್ನು ಆಂಧ್ರದ ಉಪಮುಖ್ಯಮಂತ್ರಿ ಹಾಗೂ ಅರಣ್ಯ ಪರಿಸರ ಸಚಿವ ಪವನ್ ಕಲ್ಯಾಣ್ ಅವರಿಗೆ ಹಸ್ತಾಂತರಿಸಿದರು.

ದೇವ, ಕೃಷ್ಣ, ಅಭಿಮನ್ಯು ಮತ್ತು ಮಹೇಂದ್ರ ಹೆಸರಿನ ಆನೆಗಳನ್ನು ಆಂಧ್ರದ ಅರಣ್ಯ ಇಲಾಖೆ ಅಧಿಕಾರಿಗಳು ಅಧಿಕೃತವಾಗಿ ಸ್ವೀಕರಿಸಿದರು. ಒಟ್ಟು ಆರು ಆನೆಗಳನ್ನು ನೀಡಬೇಕಾದರೂ, ಎರಡು ಆನೆಗಳನ್ನು ಆರೋಗ್ಯ ಮತ್ತು ತರಬೇತಿ ಕೊರತೆಯಿಂದಾಗಿ ಮುಂದಿನ ಹಂತದಲ್ಲಿ ನೀಡಲಾಗುವುದು ಎಂದು ಕರ್ನಾಟಕ ಸರ್ಕಾರ ತಿಳಿಸಿದೆ.

ಕರ್ನಾಟಕದ ಮಾವಾಟಿಗಳು ಎರಡು ತಿಂಗಳು ಆಂಧ್ರದ ಮಾವಾಟಿಗಳ ಜೊತೆ ಕೆಲಸ ಮಾಡಿ ತರಬೇತಿ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಅವರು ಧ್ವಜ ಬೀಸಿ, ಹೂಮಳೆಯೊಂದಿಗೆ ಕರ್ನಾಟಕದ ನಾಯಕರಿಗೆ ಆತ್ಮೀಯ ಸ್ವಾಗತ ಸಲ್ಲಿಸಿದರು. ಅವರು ಆನೆಗಳ ಆರೈಕೆ ಮತ್ತು ಆರೋಗ್ಯದ ಜವಾಬ್ದಾರಿಯನ್ನು ತಾವೇ ನಿಭಾಯಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎರಡೂ ರಾಜ್ಯಗಳ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಭವಿಷ್ಯದಲ್ಲಿಯೂ ಸಹ ಆಂಧ್ರಪ್ರದೇಶದ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚಿನ ಆನೆಗಳನ್ನು ನೀಡಲು ಕರ್ನಾಟಕ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">