ಕಂಪ್ಲಿ: ಮೇ 15 ರಂದು ವಿದ್ಯುತ್ ವ್ಯತ್ಯಯ
ಕಂಪ್ಲಿ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗ ವ್ಯಾಪ್ತಿಯ 110/11ಕೆವಿಯ ತುರ್ತು ನಿರ್ವಾಹಣಾ ಕಾರ್ಯ ಕೈಗೊಳ್ಳುತ್ತಿರುವುರಿಂದÀ ಮೇ 15 ರಂದು ಬೆಳಿಗ್ಗೆ 09 ಗಂಟೆಯಿAದ ಸಂಜೆ 05 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಕಂಪ್ಲಿ ಪಟ್ಟಣ, ರಾಮಸಾಗರ, ನಂ-10 ಮುದ್ದಾಪುರ, ಕಣಿವೆ ತಿಮ್ಮಾಪುರ, ದೇವಸಮುದ್ರ, ಹಂಪಾದೇವನಳ್ಳಿಯ ಎಫ್-6 ವಿದ್ಯಾಪೀಠ ಮಾರ್ಗ ಸೇರಿದಂತೆ ಇನ್ನೂ ಮುಂತಾದ ಪ್ರದೇಶಗಳು ಮತ್ತು ಕಂಪ್ಲಿ ಪಟ್ಟಣ ವ್ಯಾಪ್ತಿಯ ಐಪಿ ಸೆಟ್ ಎಫ್-10 ಮಾರ್ಗದ ಕೆ.ಎನ್ ಕ್ಯಾಂಪ್, ಎಫ್-5 ಮಾರ್ಗದ ಜಾನೂರು, ಎಫ್-7 ಮಾರ್ಗದ ಸಣಾಪುರ, ಎಫ್-8 ಮಾರ್ಗದ ಕಣಿವೆ ತಿಮ್ಮಾಪುರ, ಎಫ್-9 ಮಾರ್ಗದ ಮುಷ್ಟುರ್‌ಘಾಟ್ ಪ್ರದೇಶಗಳಲ್ಲಿ ಬೆಳಿಗ್ಗೆ 04 ಗಂಟೆಯಿAದ ವಿದ್ಯುತ್ ಸರಬರಾಜು ಮಾಡಲಾಗುವುದು.
ಹಾಗಾಗಿ ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಕಂಪ್ಲಿ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------------